Showing posts with label ಕಥೆ या ಹರಟೆ-ಎಲ್ಲಾರ ಮನೆ ದೋಸೆನೂ..... ellaara mane dosenoo. Show all posts
Showing posts with label ಕಥೆ या ಹರಟೆ-ಎಲ್ಲಾರ ಮನೆ ದೋಸೆನೂ..... ellaara mane dosenoo. Show all posts

Monday, 30 November 2020

ಎಲ್ಲಾರ ಮನೆ ದೋಸೆನೂ..... ellaara mane dosenoo ....


Imaginative story Time - year 2001

end- elloo ನಡೆದದ್ದು ಅಲ್ಲ imagination written sometime ಇನ್ 2002

ಇದು ನನ್ನ ಪ್ರಥಮ ಲೇಖನ. ಜಾಸ್ತಿ ಇಂಗ್ಲೀಷ್ ಪದಗಳು ಇವೆ - TPK ಮತ್ತು ನಗರ ಆಡು ಭಾಷೆ ಪ್ರಭಾವ ಅಥವಾ ಒಳ್ಳೆಯ ಸಾಹಿತ್ಯಾನುಭವ ಅಭಾವ ಇರಲೂ ಬಹುದು (ಖಂಡಿತ ಇದೆ) please.. ಓದಲು ಮುಜುಗರ ಬೇಡ. tappuಗಳಿಗೆ ಕ್ಷಮೆ ಇರಲಿ.

ಎಲ್ಲರಿಗೂ ಭಾನುವಾರ ಬಂತೂಂದ್ರೆ ಬಹಳ ಖುಷಿ. ಯಾಕಂದ್ರೆ ಅವತ್ತು ಆಫೀಸಿನ ಯಾವ ಜಂಜಾಟ ಇಲ್ದೆ ಮನೆಯಲ್ಲೇ ಆರಾಮವಾಗಿ ಕಾಲ ಕಳೆಯಬಹುದು ಅಂತ.  ಶನಿವಾರ ಕೂಡ ನಾವು ಅರ್ಧ ದಿನ ಕೆಲಸಕ್ಕೆ ಹೋಗಬೇಕು. ನನಗೂ ಕೂಡ ಹದಿನೈದು ದಿನಗಳಿಂದ ಮೀಟಿಂಗು, ಮಿನಿಸ್ಟರ್ ವಿಸಿಟ್ ಅಂತ ರಾತ್ರಿ ಹಗಲೂ ಕೆಲಸ ಮಾಡಿ ಸುಸ್ತಾಗಿತ್ತು.  ಈ ಶನಿವಾರ ಮಧ್ಯಾಹ್ನ 3 ಗಂಟೆಗೇ ಆಫೀಸ್ ಬಿಟ್ಟು ಆರಾಮವಾಗಿ ಒಂದೂವರೆ ದಿನ ಮನೆಯಲ್ಲೇ ಕಳೆಯೋಣ ಎಂದು ಮನದಲ್ಲೇ ನಿಶ್ಚಯ ಮಾಡಿಕೊಂಡು ಮನೆಗೆ ಬಂದೆ.  Scooter ನಿಲ್ಲಿಸಿ ಮನೆಯ ಒಳಗೆ ಬಂದಾಗ ನನ್ನ ಮಗಳಿಗೆ ಒಂದು ಕ್ಷಣ ಆಶ್ಚರ್ಯವಾಯಿತು.  ಯಾಕೆಂದ್ರೆ ಪ್ರತಿದಿನ ನಾನು ರಾತ್ರಿ 7ರ ನಂತರವೇ ಮನೆಗೆ ಬರುತ್ತಿದ್ದೆ.  ಇಂದು ಅವಳ ಮನಸ್ಸಿನಲ್ಲಿ ಏನೋ flash ಆಯಿತು. 

"ಅಪ್ಪಾಜಿ, ಈಗ ಸಂಜೆ 5 ಗಂಟೆಯ showಗೆ 'ಲಗಾನ್' ಚಿತ್ರಕ್ಕೆ ಹೋಗೋಣ".  

ನನ್ನಾಕೆ ತಕ್ಷಣ ದನಿಗೂಡಿಸಿದಳು "ರೀ ಪಾಪ ಮಗು ಆಸೆ ಪಡ್ತಾ ಇದೆ.  ಹೋಗೋಣ ರೀ"  

ನನಗೆ ಗೊತ್ತಿತ್ತು.  ನನ್ನಾಕೆಗೂ cinema  ಹುಚ್ಚು ಸ್ವಲ್ಪ ಇದೆ ಅಂತ.  ಹಾಗಾಗಿ ಮೌನದಿಂದ ತಲೆ ಅಲ್ಲಾಡಿಸಿದೆ.  ನನ್ನ ಸ್ವಭಾವವನ್ನು ಮದುವೆ ನಂತರ change ಮಾಡಿಕೊಳ್ಳಲೇ ಬೇಕಾದ ಪರಿಸ್ಥಿತಿ ಬಂದೊದಗಿತ್ತು.  ಹಾಗಾಗಿ ನಾನೀಗ ಮನೆಯಲ್ಲಿ ನನ್ನ ಮನೋಧರ್ಮಕ್ಕೆ ವಿರುದ್ಧವಾಗಿದ್ದರೂ "ಮಾತು ಬೆಳ್ಳಿ ಮೌನ ಬಂಗಾರ" ಅಳವಳಿಸಿಕೊಂಡಿದ್ದೇನೆ.  ಬಟ್ಟೆನೂ ಬಡಲಾಯಿಸದೆ, ಕಯ್ಯಲ್ಲೇ ತಟ್ಟೆ ಹಿಡಿದುಕೊಂಡು ಊಟಾನೂ ಗಬಗಬಾ ಅಂತ ತಿಂದು ಮನೆಯಿಂದ ಹೊರಟಿದ್ದಾಯಿತು.  ಸ್ಕೂಟರ್  ತೆಗೆಯೊಣಾಂತ ನೋಡಿದರೆ ಸ್ಕೂಟರ್ punctureಊ.  Auto ಕರೆದು talkiesಗೆ ಹೋದ್ವಿ.  ಅಲ್ಲಿ ನೋಡಿದ್ರೆ serpentineಕ್ಯೂ.   ನಮ್ಮನೆಯವಳು ಬಹಳ ಹುಷಾರು.  ಅಲ್ಲೇ Qನಲ್ಲಿ ಮುಂದೆ ನಿಂತಿದ್ದ ತನ್ನ ಸ್ನೇಹಿತೆಯನ್ನ ಹುಡುಕಿ ಮೆಲ್ಲಗೆ ಮಗಳನ್ನು ಸ್ನೇಹಿತೆಯ ಜೊತೆಗೆ ನಿಲ್ಲಲು ಹೇಳಿದಳು.  ಒಂದೆರಡು ನಿಮಿಷದ ನಂತರ ತಾನೂ ಸ್ನೇಹಿತೆಯ ಜೊತೆಗೆ ನಿಂತಳು. ಮಗಳು ಕರೆದ್ರೂ ನನ್ನ ಸ್ವಾವಲಂಬನೆ ನನಗೆ Qನಲ್ಲಿ ಬಿಟ್ಟು ಮುಂದೆ ಹೋಗಲು ನಿರಾಕರಿಸಿ ವಿಧಿ ಇಲ್ಲದೇ ಹಾಗೇ ನಿಂತುಕೊಂಡೆ. Ticketಏನೋ ಎಲ್ಲರಿಗೂ ಸಿಕ್ಕಿತು.  ಆದ್ರೆ ನನ್ನ seatಎ ಬೇರೆ, ಇವರ ಸೀಟ್ಸ್ ಬೇರೆಯಾಗಿತ್ತು.  ಟಾಕೀಸ್ ಒಳಗೆ ಆಗಲೇ artificial ಕತ್ತಲಾಗಿ ಚಿತ್ರ ಕೂಡ ಪ್ರಾರಂಭವಾಗಿತ್ತು.  ಹೇಗೋ ತಡವರಿಸುತ್ತಾ ಕಷ್ಟಪಟ್ಟು ನನ್ನ ಜಾಗಕ್ಕೆ ಬಂದು ಕುಳಿತೆ. ನನ್ನ ಜಾಗ ತುಂಬ ಮುಂದೆ ಇದ್ದದ್ದರಿಂದ ಕತ್ತೆತ್ತಿ ಸಿನೆಮಾ ನೋಡಲು ಆಗದೇ, ಇತ್ತ ನಿದ್ರೆನೂ ಮಾಡಲಾಗದೆ ಹಾಗೂ ಹೀಗೂ ಸಮಯ ಕಳೆದಿದ್ದಾಯ್ತು. ನನ್ನಾಕೆಯ ದೂರದೃಷ್ಟಿ ನನ್ನ ಸ್ವಾವಲಂಬನೆಯನ್ನು ಆಡಿಕೊಳ್ಳುತ್ತಾ ಇರುವ ಹಾಗೆ ಭಾಸವಾಯ್ತು. ಚಿತ್ರ ನೋಡಿ ಮನೆಗೆ ಹಿಂದುರುಗಿದಾಗ ರಾತ್ರಿ 9 ಗಂಟೆ. 

"ರೀ... ಬೆಳಿಗ್ಗೆಯ ಸಾಂಬಾರು ಸ್ವಲ್ಪ ಇದೆ.  ಅದನ್ನೇ ಬಿಸಿ ಮಾಡಿ ಒಂದು ಲೋಟ ಅಕ್ಕೀನ cookerನಲ್ಲಿ ಇಟ್ಬಿಡಿ."  ಅಂತ ನನ್ನ ಧರ್ಮ ಪತ್ನಿ ಹೇಳಿದಾಗ ಮನಸ್ಸಿಲ್ದೆ ಕಾರ್ಯಮಗ್ನನಾದೆ.  ಎಲ್ಲಾರೂ ಊಟ ಮುಗಿಸಿದಾಗ ರಾತ್ರಿ 10 ಗಂಟೆ ಹೊಡೆದದ್ದು ಪಕ್ಕದ್ಮನೆ ಗಡಿಯಾರದಿಂದ ಕೇಳಿಸ್ತಾ ಇತ್ತು.

"ರೀ.... ಇವತ್ತು Amitabh Bachchan picture ದೂರದರ್ಶನದಲ್ಲಿ ಇದೆ" ಅಂತ ಇವಳು ಹೇಳಿದಾಗ ಅಮಿತಾಬ್ ಪಿಕ್ಚರ್ ಮಾತ್ರ miss ಮಾಡಲೇ ಬಾರದು ಎಂದು ಎಲ್ಲಾರೂ ಪಿಕ್ಚರ್ ನೋಡೋಕೆ decide ಮಾಡಿದ್ವಿ.  ಆ ಜಾಹೀರಾತುಗಳ ಸುರಿಮಳೆಯಿಂದ ಎರಡೂವರೆ ಗಂಟೆಯ ಚಿತ್ರ ನಾಲಕ್ಕು ಗಂಟೆ ತೆಗೆದುಕೊಂಡು ಟಿವಿ ಆರಿಸ್ದಾಗ ರಾತ್ರಿ 2 ಹೊಡೆದಿತ್ತು.  

"ರೀ... ಬೆಳಿಗ್ಗೆ ನನ್ನ ಮಾತ್ರ ಎಬ್ಬಿಸಲೇ ಬೇಡಿ, ಕುಡಿಯುವ ನೀರು ಹಿಡಿಯುವ ಹಾಗೇ ಹಾಲು ತೆಗೆದುಕೊಳ್ಳುವ ಕೆಲ್ಸ ನಿಮದೇ" ಎಂದು ಇವ್ಳು ಹೇಳಿದಾಗ ಬರುತ್ತಿದ್ದ ನಿದ್ರೆ ಆಗ್ಲೇ ಮಾಯವಾಗಿ ಹೋಯ್ತು.  ಬೆಳಿಗ್ಗೆ 5 ಗಂಟೆಗೆ alarm ಇಟ್ಟೆ.  ಮಲಗೋಣಾಂತ ಅಂದುಕೊಂಡ್ರೆ ಎಲ್ಲಿ ಬರುತ್ತೆ ನಿದ್ರೆ ?  ಏನ್ಮಾಡೋದು ?  ಕುರಿ ಎಣಿಸ್ತಾ ಹೋದೆ,  ಸುಮಾರು 310 ಏಣಸಿರಬಹುದು, ಜಂಪರು ಹತ್ತಿರಬೇಕು, ಅಲಾರಾಂ trin trin  ಅಂತ ಕಿರುಚಿದಾಗ ಎದ್ದು ಮುಖಾನೂ ತೊಳಿಯದೆ ನಲ್ಲಿಯ ಹತ್ತಿರ ಹೋಗಿದ್ದಾಯ್ತು ಕುಡಿಯುವ ನೀರು ತುಂಬಿಸಲು. ಸ್ವಲ್ಪ ಸಮಯಕ್ಕೇ ಹಾಲಿನವನು ಬಂದು ಹಾಲು ಕೊಟ್ಟಾಗ ಅದನ್ನು ಕಾಯಿಸಿ ಸ್ವಲ್ಪ ಬಿಸಿ ಬಿಸಿ coffee ಮಾಡ್ದೆ.  ಕಾಫೀ ಹೀರುತ್ತಾ paper ಕಡೆ ಕಣ್ಣಾಡಿಸ್ದೆ.  ನನ್ನಾಕೆಗೆ surprise ಆಗಿ ಕಾಫಿ ಕೊಡೋಣಾಂತ ಯೋಚಿಸಿ 7 ಗಂಟೆಗೆ ಇನ್ನೊಂದು dose ಕಾಫಿ ಮಾಡಿ ಇವಳನ್ನು ಎಬ್ಬಿಸ್ದೆ.  ಆದ್ರೆ ಇವಳು ಅರೆ ಮನಸ್ಸಿನಿಂದ ಎದ್ದು bed ಕಾಫಿ ಕುಡಿಯಲು ಪ್ರಾರಂಭಿಸಿದ್ಳು.  

"ರೀ... coffee powder ಕಮ್ಮಿ ಆಗಿದೆ.  Tasteಎ ಇಲ್ಲ, ಇನ್ನು ಸ್ವಲ್ಪ ಪೌಡರ್ ಹಾಕ್ಬೇಕಿತ್ತು" .  Thanks, ಹೋಗಲಿ, comments ಆದ್ರೂ ಬೇಡವಾಗಿತ್ತು.  ನಾನು ಮೌನ.  ಇವ್ಳು ಪತ್ರಿಕೆಯನ್ನು ನನ್ನಿಂದ ಕಸಿದು ಸಿನಿಮಾ ರಂಗದ ವಿಭಾಗದ ಮೇಲೆ ಕಣ್ಣು ಹಾಯ್ಸಿದ್ಳು.  ಶಾರುಖ್ ನ ಹೊಸ picture, ಹೃತೀಕ್ ನ ಮದುವೆ etc.. ಅಂತ headlines ಓದುತ್ತಾ 
"ರೀ... ಇವತ್ತಿನ paper ನಲ್ಲಿ ಒಳ್ಳೊಳ್ಳೆ ವಿಷಯಗಳಿವೆ.  ಚೂರು ತರಕಾರಿ ಹೆಚ್ಚಿ ಒಂದು ಲೋಟ ರವೆ ಹುರಿದಿಟ್ ಬಿಡಿ.   ನಾನು ಬಂದು ಉಪ್ಪಿಟ್ಟು ಮಾಡ್ತೇನೆ."
"ಲೇ.. ರವೆ ಹುರಿದಾಯ್ತು"
"ಮೆಣಸಿನಕಾಯಿ, ಈರುಳ್ಳಿ ಹೆಚ್ಚಿ ready ಮಾಡದ್ರಾ"
"ಇಲ್ಲ ಮರೆತೆ"
"ಅದನ್ನು ಮುಗ್ಸಿ ಒಗ್ಗರಣೆ ಕೊಟ್ಟು, ಈರುಳ್ಳಿ ಹುರಿದು 2 ಲೋಟ ನೀರು ಹಾಕಿ ಕುದಿಯೊಕ್ಕಿಡಿ.   ನಾನು ಬರ್ತೀನಿ."

ಇಷ್ಟೆಲ್ಲಾ ಮಾಡಿದ್ಮೇಲೆ ಇನ್ನೇನು ಬಾಕಿಯಿದೆ ಉಪ್ಪಿಟ್ಟು ಮಾಡೋಕೆ ಅಂತ ಮನಸ್ಸಲ್ಲೇ ಅಂದ್ಕೊಂಡೆ.  ಅಂತೂ ಉಪ್ಪಿಟ್ಟು ತಿಂದಿದ್ದಾಯ್ತು.  ಹಾಗೇ ಮಗಳನ್ನೂ ಎಬ್ಬಿಸಿ ಹಾಸಿಗೆ, bed sheets ಎಲ್ಲಾ ಮಡಿಚಿ ಸ್ನಾನ ಮುಗಿಸಿದಾಗ ಒಂಬತ್ತುವರೆ ಗಂಟೆಯಾಗಿತ್ತು.  

"ರೀ... Bazaarಗೆ ಹೋಗಿ ಮನೆ ಸಾಮಾನುಗಳನ್ನು, ಮತ್ತೇ ತೆಂಗಿನಕಾಯಿ, ತರಕಾರಿಗಳನ್ನು ತಂದುಬಿಡಿ."

ಹೂ ಎಂದು ತಲೆಆಡ್ಸಿ ಆ ಕೆಲ್ಸ ಮುಗ್ಸಿ ಮನೆಗೆ ಬಂದಾಗ ಮಧ್ಯಾಹ್ನ ಹನ್ನೆರಡುವರೆ ಗಂಟೆ. ಇವಳಿಗಾಗ್ಲೇ ಸಿಟ್ಟು ಬಂದಂಗೆ ಕಾಣಿಸ್ತು.  

"ಏನ್ರೀ ಸ್ವಲ್ಪ ಮನೆ ಸಾಮಾನು, ತರಕಾರಿ ತನ್ನಿಂತಾ ಅಂದ್ರೆ ಇಷ್ಟು ಹೊತ್ತ ಮಾಡೋದು ?  ತರಕಾರಿ ಬಂದಮೇಲೆ ಅಡುಗೆ ಪ್ರಾರಂಭಿಸೋಣ ಅಂತ ಕಾದೂ ಕಾದೂ ಸಾಕಾಯ್ತು. "

ಇನ್ನು ಕುರುಕ್ಷೇತ್ರ ಎಲ್ಲ ಬೆಡಾಂತ, ದಾರಿಯಲ್ಲಿ ನನ್ನ ಸ್ನೇಹಿತ ಸಿಕ್ಕಿದ್ದು, ಅವನ ಜೊತೆ hotel ಕಾಫಿ ಕುಡಿದಿದ್ದು ಏನೂ ಹೇಳ್ದೆ, ಇವಳಿಗೆ ಅಡುಗೆ ಕೆಲ್ಸದಲ್ಲಿ ಸ್ವಲ್ಪ ಸಹಾಯ ಮಾಡಿ ಇವಳ tension ಕಡಿಮೆ ಮಾಡ್ಸಿದ್ದಾಯ್ತು. ಊಟ ಮುಗ್ಸಿದಾಗ ಎರಡೂವರೆ ಗಂಟೆ.  ಇನ್ನೇನು ಸ್ವಲ್ಪ rest ಮಾಡೋನಾಂತ ಯೋಚಿಸುತ್ತಿರುವಾಗ್ಲೇ, 

"ರೀ... ಮಗುವಿನ ಸ್ಕೂಲ್ uniform ಗೆ iron ಮಾಡಿಲ್ಲ, ಹಾಗೆ ನಿಮ್ಮ ಬಟ್ಟೆನೂ, ನನ್ನ 3 blouses ಕೂಡ ಇದೆ."  ಸರಿ, ಈ ಕಾರ್ಯಗಳೆಲ್ಲ ಮುಗ್ಸಿದಾಗ ಸಮಯ 4 ಗಂಟೆಯಾಗಿತ್ತು.  ಮಗಳು "ಅಪ್ಪಾಜಿ, ನನ್ನ ಎರಡು note books ಗಳಿಗೆ wrapper ಹರಿದಿದೆ.  Teacher ಬೈತಾರೆ, ಈಗ್ಲೇ ಹಾಕು" ಎಂದು ಹಠ ಹಿಡಿದಾಗ ಆ ಕೆಲ್ಸನೂ ಮುಗಿಸಿದಾಗ ಸಂಜೆ ನಾಲ್ಕೂವರೆ  ಗಂಟೆಯಾಗಿತ್ತು.  

"ರೀ... terrace ಮೇಲೆ ಬಟ್ಟೆ ಒಣಗಿರಬೇಕು, please ತಂದ್ ಬಿಡಿ." ಆ ಬಟ್ಟೆಗಳನ್ನೆಲ್ಲ (ಸಧ್ಯ, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು maid ಇದ್ದಾಳೆ) ತಂದು ಮಡಿಚಿ, ಮಗಳ ಬಟ್ಟೆಗಳನ್ನು ಅವಳದೇ ಅದ ಭೀರುವಿನಲ್ಲಿ ಇಡಕ್ಕೆ ಹೋದಾಗ ಭೀರುವಿನಲ್ಲಿದ್ದ ಬಟ್ಟೆಗಳೆಲ್ಲ ಕೆಳಕ್ಕೆ ಬಿದ್ದು, ಅದನ್ನೆಲ್ಲ ಸರಿ ಮಾಡಲು ಒಂದು ಗಂಟೆ ಬೇಕಾಯ್ತು.  

"ರೀ... ವೈಷ್ಣವೀ Lodge ಎದುರಿಗೆ corner ನಲ್ಲಿ ತೊಗರಿ ನುಚ್ಚಿನುಂಡೆ ಬಹಳ ಚೆನ್ನಾಗಿ ಮಾಡ್ತಾನೆ.  ಅದನ್ನು, ಮತ್ತು  ಹಾಗೆಯೇ  ಹೀರೆಕಾಯಿ ಬೋಂಡ ತಂದ್ಬಿಡ್ತೀರಾ." 

Scooter ಬೇರೆ punctureಉ, ಆಟೋರಿಕ್ಷಾ expensiveಉ, ಬೋಂಡ ಖರ್ಚಿಗಿಂತ ಆಟೋ chargeಎ ಜಾಸ್ತಿ  ಅಂತ ಯೋಚಿಸಿ, one time ನಡೆದುಕೊಂಡು ಹೋಗಿ, ವಾಪಸ್ಸು ಆಟೋದಲ್ಲಿ ಮನೆಗೆ ಬಂದಾಗ ಆಗಲೇ ಸಂಜೆ ಆರೂವರೆ ಆಗಿತ್ತು.  

ಮನೆಯಲ್ಲೋ ಗಲಾಟೆಯೊ ಗಲಾಟೆ.  ಇವ್ಳ ಸ್ನೇಹಿತೆಯರು, ಅದೂ  ನಾಲ್ಕು ಜನ, ಆಗಲೇ ಬಂದು ಹರಟೆ ಹೊಡೀತಾ ಕುಳಿತಿದ್ರು. ಬೋಂಡ smell,  ಬಂದಿದ್ದ guests ಗಳ ಮೂಗಿಗೆ ಹೊಡೆದು ಎಲ್ಲಾರೂ ನನ್ನ ಕೈಯಲ್ಲಿರುವ plastic ಬ್ಯಾಗನ್ನೇ ನೋಡಿದಾಗ ವಿಧಿ ಇಲ್ದೆ "ನೀವೆಲ್ಲ ಬರ್ತೀರಾಅಂತ ನಾನು ಮೊದಲೇ guess ಮಾಡಿ special items ಗಳನ್ನೆಲ್ಲ  ತಂದಿದ್ದೇನೆ. Fresh ಆಗಿ ಬಿಸಿ ಬಿಸಿ ಇದೆ" ಅಂತ ಹೇಳಿ ಬ್ಯಾಗ್ನ  ಇವಳ ಕೈಗೆ ಕೊಟ್ಟೆ.  ಎಲ್ಲಾ ಸ್ನೇಹಿತೆಯರು ಒಟ್ಟಿಗೇ thanks ಎಂದು ಹೇಳಿದಾಗ 'welcome' ಹೇಳಲು ಮನಸ್ಸಿಲ್ದೆ ಹುಸಿನಗೆ ಬೀರಿ ಒಳಗೆ ಹೋದೆ.  

ನಾನು ತಂದಿದ್ದೆಲ್ಲ ಬಂದಂತಹ ಅತಿಥಿಗಳಿಗೇ ಕೊಟ್ಟಿದ್ದಾಯ್ತು. ಅವರೆಲ್ಲ ಹೋದಾಗ ರಾತ್ರಿ ಎಂಟೂವರೆ ಗಂಟೆ.  
"ರೀ... ಸ್ವಲ್ಪ ಅನ್ನ ಮಾಡಲಾ"
ಇವಳು 'ಮಾಡಲಾ' ಅನ್ನೋ ಶಬ್ದ ಕೇಳಿ ನನಗೆ promotion ಸಿಕ್ಕಿದಷ್ಟು  ಆನಂದ ಆಯ್ತು.  
"ಬೇಡ ಕಣೇ,  ಸ್ವಲ್ಪ ತಲೆ ನೋಯ್ತಾ ಇದೆ"
ತಕ್ಷಣ ಅವಳು zandu balm ತಂದು ನನ್ನ ಹಣೆಗೆ ಹಚ್ಚಲು ಬಂದಾಗ 
"ಬೇಡ ನಾನೇ ಹಚ್ಕೋತೀನಿ" (ಅಭ್ಯಾಸ ಬಲ) ಎಂದು ಹೇಳಿದ್ರೂ ಬಲವಂತದಿಂದ balm ಹಚ್ಚಿಸಿಕೊಳ್ಳುತ್ತಿರುವಾಗಲೇ ನಿದ್ರೆ ಬಂದದ್ದು ಗೊತ್ತಾಗ್ಲಿಲ್ಲ.  ನನ್ನ Bossಉ 'ಭಾನುವಾರ ಮಾತ್ರ ಆಫೀಸಿಗೆ ಬರಲೇಬಾರದು, ಒಂದಿನವಾದ್ರೂ ಮನೆಯಲ್ಲೇ full rest ತಗೊಳ್ಳಬೇಕು' ಅಂತ ಯಾವಾಗ್ಲೂ ಹೇಳ್ತಿದ್ದಿದ್ದು ನನ್ನ ಮನಸ್ಸಿನಲ್ಲಿ flash ಆಯ್ತು.
ಬಹುಷಃ ಅವರ ಮನೆಯ ಸ್ಟಿತೀನೂ....... ಅಥವಾ 'ಎಲ್ಲಾರ ಮನೆ ದೋಸೆನೂ.....'
end- ನಡೆದದ್ದು ಅಲ್ಲ imagination written sometime ಇನ್ 2002
was published in office magazine

.
back to  

end.

.