Imagination - poem
ಸಿಗದಿದ್ದರೂ ತ್ರಾಸಿಲ್ಲ ಮನ ಧೃಢವಾಗಿಯೇ ಇತ್ತು
ಧೃಢವಾಗಿರದಿದ್ದರೂ ಪರವಾಗಿಲ್ಲ ಭಂಡ ಧೈರ್ಯವೊಂದಿತ್ತು
ದೊಡ್ಡ ಕವಿಯಾಗಲು ಮಾತ್ರ ಮನ ಬಯಸುತ್ತಿತ್ತು
ಕವನದಲ್ಲೆನೇ ಇರಲಿ ಬಿಡಲಿ
ಯೋಚಿಸಿ ನಾನೇನು ತಾನೇ ಮಾಡಲಿ
ಬರೆದೆ ನೂರೊಂದು ಕವಿತೆ
ನನಗಿದೆ ರಾಜಕಾರಣಿಯ ಜೊತೆ
ಸಿಗುತಿದೆ ನನಗೀಗ ಘನತೆ
ಈಗಿಲ್ಲ ನನಗೇನು ಕೊರತೆ
ನನ್ನಂತೆ ಆಗಬೇಕೆ?
ಘನತೆ ಸಿಗಬೇಕೆ?
ಬರುತಿದೆ ಚುನಾವಣೆ
ರಾಜಕಾರಣಿಗೀಗ ಬವಣೆ
ಕಾರ್ಯ ಮಗ್ನರಾಗಿರಿ
ಸಹಾಯ ಮಾಡಿರಿ
ಓಟು ಬೇಡಿರಿ
ಕಾಡಿ ಬೇಡಿರಿ
ನಂತರ ನೀವು ಕಾಣಿ
ನಮ್ಮೀ ರಾಜಕಾರಿಣಿ
ನೀವೊಬ್ಬ ದೊಡ್ಡ ಕವಿ ಆದಂತೆ
ಅಪಾಯವಿಲ್ಲದ ಉಪಾಯ ಫಲಿಸಿಸಿದಂತೆ
end- elloo ನಡೆದದ್ದು ಅಲ್ಲ imagination written sometime ಇನ್ 2002