Imagination - poem
ಸ್ವಾವಲಂಬನೆಯು ಉತ್ತುಂಗದಲ್ಲಿ
ನಾನು ಮಾಡಿದ್ದೇ ಸರಿಯೆಂದು
ಮನಸು ಹೇಳುತಿರಲು
ಜೀವನದ ಮರ್ಮವನು ಅರಿಯದಾದೆನು
ಹಿರಿಯರಿಗೆ ನಾ ಬೇಡವಾದೆ
ಹಿರಿಯರೂ ಬೇಡವಾದರೆನೆಗೆ
ವರುಷಗಳು ಕಳೆದಂತೆ
ಮನಸು ಪಕ್ವಾವಾದಂತೆ
ತಪ್ಪುಗಳ ಅರಿವಾಯಿತೆನೆಗೆ
ಅಂತರಾಳದ ಭಾವನೆಗಳು
ಮನದಲಿ ಕಾಡುತಿರಲು
ಉತ್ತರಗಳ ಹುಡುಕಲು ತಡಕಾಡಿದೆ
ಏನನ್ನು ಮಾಡಲಿ
ಯಾರನ್ನು ಬೇಡಲಿ
ಮನಸ್ಸಿನಾ ದ್ವಂದಗಳ
ಪರಿಹಾರ
ಹೇಗೆ ತಾನೇ ನಾ ಪಡೆಯಲಿ
ಅದೇ ಮನಸ್ಸು ಪರಿ ಪರಿ ಹೇಳಿತೀಗ
ಪಡೆ ನೀನು ಪರಿಹಾರ
ನಿನ್ನ ಹಿರಿಯರ ಮಾರ್ಗದರ್ಶನದಲಿ
ವರುಷಗಳುರುಳಿದಂತೆ
ಬದಲಾಯಿತು ಮನಸ್ಸು
ಏನೀ ವಿಪರ್ಯಾಸ!
end- elloo ನಡೆದದ್ದು ಅಲ್ಲ imagination written sometime ಇನ್ 2002