Imaginative write-up
ಪ್ರಹಸನ ಲೇಟೆಸ್ಟ್ ಫ್ಯಾಶನ್ latest fashion
ಪಾತ್ರಗಳು
1. ಗಂಡ ವಯಸ್ಸು 35 -ಉಡುಗೆ-ಜುಬ್ಬಾ ಪೈಜಾಮ(scene 1)
- ಜೀನ್ಸ್ ಪ್ಯಾಂಟ್, T ಶರ್ಟ್ (scene 2)
2. ಹೆಂಡತಿ - ಉಡುಗೆ ಸ್ಕರ್ಟ್
3. ಹುಡುಗಿ - ಉಡುಗೆ ಪ್ಯಾಂಟ್, T ಶರ್ಟ್, Goggles
Scene 1
ಗಂಡ: ಲೇ ಎಲ್ಲಿದ್ದೀಯಾ ? ನಾನು ಬಂದು ಎಷ್ಟೋ ಹೊತ್ತಾಯ್ತು. ಕಾಫೀ ಇನ್ನೂ ತಂದು ಕೊಟ್ಟಿಲ್ವಲ್ಲ. ಲೇ... ಬಾರೇ ಬೇಗ
ಹೆಂಡತಿ: (ಬರುತ್ತಾ) ಬಂದೆ ಕಣ್ರೀ, ಕಾಫೀ ಮಾಡೋಕೆ ಅಡಿಗೆ ಕೋಣೆಯಲ್ಲಿದ್ದೆ ರೀ ತಗೊಳ್ ರೀ ಕಾಫೀ
ಗಂಡ: ಲೇ ! ಏನೇ ಇದು ನಿನ್ನ ಅವತಾರ ! ಎಲ್ಹೊಯ್ತೆ ನಿನ್ನ ಸೀರೆ ! ಸ್ಕರ್ಟ್ ಹಾಕೊಂಡ್ ಯಾಕೆ ನಮ್ಮ ಭಾರತೀಯ ಸಂಸ್ಕೃತೀನ ಹಾಳ್ ಮಾಡ್ ತ್ತಿದ್ದೀಯಲ್ಲೇ ?
ಹೆಂಡತಿ: ರೀ.. ಇದು ಈಗಿನ ಫ್ಯಾಶನ್ ಕಣ್ರೀ, ಮತ್ತೇ ನನ್ನ ಹತ್ತಿರ ಇದ್ದ ಹಳೇ ಸೀರೆಗಳನ್ನೆಲ್ಲಾ ಕೊಟ್ಟು ಈಗಿನ ಫ್ಯಾಶನ್ ಆದ ಸ್ಕರ್ಟ್ಗಳನ್ನು ತಗೊಂಡೆ ರೀ
ಗಂಡ: ಅಯ್ಯೋ ರಾಮ ರಾಮ... ಅಂದ್ ಹಾಗೆ ಇದೇನೇ ಇದು ಕಾಫೀ ನ ಕಪ್ ಸಾಸರ್ ನಲ್ಲಿ ಕೊಟ್ಟಿದ್ದೀಯಲ್ಲೇ. ನಾನು ಕುಡೀತ್ತಿದ್ದ ಸ್ಟೀಲ್ ಲೋಟ ಎಲ್ಲೇ ?
ಹೆಂಡತಿ: ರೀ.. ಆ ಲೋಟಗಳನ್ನೆಲ್ಲ ಕೊಟ್ಟು ಈ ಕಪ್ ಸಾಸರ್ ನ ಹೊಸ ಸೆಟ್ ತಂದಿದ್ದೀನಿ. ಸ್ಟೀಲ್ ಲೋಟ ಎಲ್ಲಾ ಹಳೇ ಫ್ಯಾಶನ್ ರೀ
ಗಂಡ: ಅಲ್ಲಾ ಕಣೇ.. ಯಾರೇ ನಿನ್ನ ಬುದ್ಧೀನ ಕೆಡಿಸಿದ್ದು, ಆ ಪಕ್ಕದ್ ಮನೆ ಕ್ರಿಶ್ಚಿಯನ್ ಕ್ರಿಸ್ಟೀ ನೇನೇ ? ಯಾಕೆ ಹೀಗಾದೇ ?
ಹೆಂಡತಿ: ಯಾರೂ ಇಲ್ಲಾ ರೀ TV ನೋಡಿ ರೀ, ಅಕ್ಕಾ ಪಕ್ಕಾ ನೋಡಿ ಮತ್ತೇ ಜಗತ್ ನೋಡಿ ರೀ. ಎಲ್ಲ ಹೊಸದು, ನೀವು ಇನ್ನೂ 19 ನೆಯ ಶತಮಾನದ ತರಹ ಇದ್ದೀರಾ. ಈಗಿನ ಫ್ಯಾಶನ್ ನೋಡಿ ಸ್ವಲ್ಪ ಆದ್ರೂ ಚೇಂಜ್ ಆಗ್ರಿ. ಮತ್ತೇ... ಇಲ್ ನೋಡ್ರೀ ಹೊಸ ಪ್ಯಾಂಟ್ ಹೊಸ Tಶರ್ಟ್ಊ..
ಗಂಡ: ಏನೇ ಇದು ನಾನ್ ಹಾಕೊಳ್ ತ್ತಿದ್ದ ಜುಬ್ಬಾ ಪೈಜಾಮ ಮಾರಿಲ್ಲ ತಾನೇ ?
ಹೆಂಡತಿ: ಅದನ್ನೆಲ್ಲಾ ಕೊಟ್ಟು ಈ ಹೊಸ ಸ್ಲಿಮ್ ಫಿಟ್ ಜೀನ್ಸ್ ಪ್ಯಾಂಟ್ ಮತ್ತು ಹೊಸ T ಶರ್ಟ್ ಗಳ ಮೂರು ಸೆಟ್ ತಂದಿದೀನಿ ರೀ. ನೀವು ನಾಳೆಯಿಂದ ಈ ಡ್ರೆಸ್ ನ್ನೇ ಹಾಕೊಂಡ್ ಆಫೀಸ್ ಗೆ ಹೋಗ್ ಬೆಕ್ರೀ ತಿಳೀತಾ ?
ಗಂಡ: ಯಾಕೆ ನಾನು ಯಾವಾಗ್ಲೂ ಹಾಕೊಳ್ ತ್ತಿದ್ದ ಜುಬ್ಬಾ ಪೈಜಾಮ ಚೆನ್ನಾಗಿಲ್ವೇನೇ. ಎಂದೂ ಹಾಕದ ಈ ಜೀನ್ಸ್ ಪ್ಯಾಂಟ್ ಮತ್ತು T ಶರ್ಟ್ ಹಾಕ್ಕೊಂಡ್ ಆಫೀಸ್ ಗೆ ಹೋಗಿ ಹೇಗೆ ನನ್ನ ಮುಖ ತೋರಿಸ್ಲೀ. ಥೂ ಈ ದರಿದ್ರ Tಶರ್ಟ್ಉ, ಡಾರ್ಕ್ ಕಲರ್ ಬೇರೇ, ಹಾಕೊಂಡ್ರೆ ಒಳ್ಳೇ ರೌಡಿ ತರಹ ಕಾಣ್ತೀನಲ್ಲೇ ?
ಹೆಂಡತಿ: ರೀ.. ಸ್ವಲ್ಪ ಈಗಿನ ಕಾಲದವರ ತರಹ ಬದ್ಲಾಗ್ರೀ.. ಒಳ್ಳೇ ಹಳ್ಳೀ ಗುಗ್ಗೂ ಹಾಗೆ ಕಾಣ್ ತ್ತಿದ್ದೀರಲ್ ರೀ.. ಇನ್ಮೇಲಾದ್ರೂ ಲೇಟೆಸ್ಟ್ ಆಗಿ ಕಾಣ್ರೀ. ಗೊತ್ತಾಯ್ತ ?
(ಒಳಗೆ ಹೋಗುವಳು)
ಗಂಡ: (ಸ್ವತಃ) ಅಲ್ಲಾ ಇವಳಿಗೆ ಏನಾಯ್ತು ಅಂತಾ ? ಹೊಸ ಫ್ಯಾಶನ್ಉ, ಲೇಟೆಸ್ಟ್ ಮಾಡೆಲ್ ಊ ಅಂತೆಲ್ಲ ಹೇಳಿ ನಮ್ಮ ದೇಶದ ಸಂಸ್ಕೃತೀನೆ ಹಾಳ್ ಮಾಡ್ತಿದ್ದಾಳಲ್ಲ, ಅಯ್ಯೋ ಎನ್ ಮಾಡ್ ಲೀ ?
(ಒಳಗೆ ಹೋಗುವನು)
Scene 2
ಗಂಡ: (ಒಬ್ಬಳು ಜೀನ್ಸ್ ಪ್ಯಾಂಟ್ ಮತ್ತು T ಶರ್ಟ್ ಹಾಕಿರುವ ಹುಡುಗಿ ಜೊತೆಗೆ, ತಾನೂ ಜೀನ್ಸ್ ಪ್ಯಾಂಟ್ ಮತ್ತು T ಶರ್ಟ್ ಹಾಕಿಕೊಂಡು)
ಕಮಾನ್ ಡಾರ್ಲಿಂಗ್, ಇದೇ ನಿನ್ನ ಮನೆ. ಇವತ್ನಿಂದ ನೀನು ಇಲ್ಲೇ ಇರು ಡಾರ್ಲಿಂಗ್
ಹೆಂಡತಿ: (ಬರುತ್ತಾ) ರೀ ಏನ್ರೀ ಇದು ? ಯಾವಳ್ ನೋ ಕರ್ ಕೊಂಡ್ ಬಂದು ಇಲ್ಲೇ ಇರು ಡಾರ್ಲಿಂಗ್ ಅಂತ ನನ್ ಮುಂದೇನೇ ಹೇಳ್ ತ್ತಿದ್ದೀರಲ್ಲ, ಏನ್ರೀ ಇದು ?
ಗಂಡ: ನೀನೇ ಹೇಳ್ತ್ತಿದ್ದೀಯಲ್ಲೇ.. ನೀನೇ ಹಾಕಿ ಕೊಟ್ಟ ಪಾಠ ಕಣೇ ಇದು, ಅದೇ ಹಳೆದನ್ನು ಬಿಸಾಕಿ ಹೊಸದನ್ನು ಇಟ್ಕೋಬೇಕು ಅಂತ, ಮತ್ತೇ.. ಅದೇನೋ ಲೇಟೆಸ್ಟ್ ಆಗಿ ಇರಬೇಕು ಅಂತಾನೂ ಹೇಳ್ತ್ತಿದ್ದೀಯಲ್ಲೇ. ಅದಕ್ಕೇ ಹಳೇ ಹೆಂಡತೀನ ಕಳ್ಸಿ ಹೊಸಬಳನ್ನು ಮನೇಲಿ ಇಟ್ಕೊಳ್ಳೋಣಾ ಅಂತ ನಾನು ನಿರ್ಧಾರ ತಗೊಂಡಿದ್ದೀನಿ.
ಹೆಂಡತಿ: ರೀ... ತಪ್ಪಾಯ್ತು ಕಣ್ರೀ, ಇನ್ ಮೇಲೆ ಹಾಗೆಲ್ಲ ಮಾಡೋಲ್ಲ, ಪ್ಲೀಸ್ ಇವಳ್ ನ ಹೊರಗೆ ಕಳ್ಸೀ ರೀ
ಹುಡುಗಿ: (ಕನ್ನಡಕ ತೆಗೆದು) ಅತ್ತಿಗೆ, ನಾನು ಅತ್ತಿಗೆ ಇವನ ತಂಗೀ, ನಿಮ್ಮ ಮನಸ್ಸನ್ನು ಬದಲಾಯಿಸಲು ಈ ನಾಟಕ ಆಡೋಣಾಂತ, ಅಣ್ಣಾ ಹೇಳಿದ್ದ. ಅದಕ್ಕೇ ಈ ಡ್ರೆಸ್ನಲ್ಲಿ ಹೀಗೆ ನಾನು ಬರಬೇಕಾಯ್ತು. ಸಧ್ಯ ನೀವು ಚೇಂಜ್ ಆದ್ರಲ್ಲ, ಅಷ್ಟೇ ಸಮಾಧಾನ
ಹೆಂಡತಿ: ಅಬ್ಬಾ ! ನಾನು ಯಾರೋ ಅಂದ್ ಕೊಂಡ್ ಬಿಟ್ಟಿದ್ದೆ ತುಂಬಾ ಹೆದರಿ ಬಿಟ್ಟಿದ್ದೆ ಕೂಡ, ಬಾರೇ ಒಳಗೇ
(ಗಂಡನ ಕಡೆ ನೋಡಿ) ರೀ ತಪ್ಪಾಯ್ತು ಕಣ್ರೀ.. ನನಗೆ ಈಗ ಬುದ್ಧಿ ಬಂತು, ಕ್ಷಮಿಸ್ ಬಿಡ್ರೀ
ಗಂಡ: ಲೇ ಇಗ್ಲಾದ್ರೂ ಗೊತ್ತಾಯ್ತಲ್ಲ ನಮ್ಮ ದೇಶ, ನಮ್ ಸಂಸ್ಕೃತಿ ಎಷ್ಟು ಚೆನ್ನ ಅಂತಾ. ಇವಳ್ ನ ಕರ್ ಕೊಂಡ್ ಹೋಗಿ ನಿಂದೇ ಒಂದು ಸೀರೆ ಕೊಡು. ಈ ಪ್ಯಾಂಟ್ ಶರ್ಟ್ ಯಾವ್ದೂ ಬೇಡಾ. ಹಾಗೆನೇ ನಾನೂ ನನ್ನ್ ಜುಬ್ಬಾ ಪೈಜಾಮ ಹಾಕೊಂಡ್ ಬರ್ತೀನಿ
ಹೆಂಡತಿ: ಆಯ್ತು ಕಣ್ರೀ... ಮತ್ತೇ..
ಗಂಡ: ಏನೇ ಅದು ಮತ್ತೇ ?
ಹೆಂಡತಿ: ಎಲ್ಲರಿಗೂ ಕಾಫೀನ ಸ್ಟೀಲ್ ಲೋಟದಲ್ಲೇ ತರ್ತೀನಿ
ಗಂಡ: ಹಾ ಹಾ ಹಾ.... ಓ ಕೆ
curtain closes
end- ನಡೆದದ್ದು ಅಲ್ಲ imagination written someಟೈಮ್ in 2002