Prerana Rao is in the centre
Imaginative letter
ಇದು ನನ್ನ ಮಗಳು ಪ್ರೇರಣಾ ಬರೆದಂತಹ ಕೃತಿ - ವರ್ಷ 2002 saving it here in blog
ವಿಶೇಷ
ಪ್ರೇರಣಾ ತರಗತಿಯಲ್ಲಿರುವ ವಿದ್ಯಾರ್ಥಿನಿಯರ ಹೆಸರುಗಳು
- ಅರ್ಚನ
- ವನಿತಾ
- ಪ್ರೀತಿ
- ರಮ್ಯ
- ಕಾವ್ಯ
- ಅರ್ಚನ
- ಅವಂತಿ
- ರತಿ
- ಶ್ವೇತ
- ನೇತ್ರ
- ದಿವ್ಯ
- ರಶ್ಮಿ
- ಚೇತನ
- ಅರ್ಚನ
- ಸಂಗೀತ
- ಪೂರ್ಣಿಮ
- ಶಶಿ
- ಪಲ್ಲವಿ
- ಪ್ರತಿಮ
- ಕಾವ್ಯ
- ಪ್ರೇರಣಾ
ಒಬ್ಬ ಅರ್ಚನ ಎಂಬ ವನಿತೆಯನ್ನು ಪ್ರೀತಿಸಿ ಒಂದು ರಮ್ಯವಾದ ಕಾವ್ಯವನ್ನು ಬರೆದು ತನ್ನ ಸ್ನೇಹಿತೆಯಾದ ಅವಂತಿಯ ಮೂಲಕ ತಲುಪಿಸಲು ಯೋಚಿಸಿ ಆ ಕಾವ್ಯದಲ್ಲಿ "ರತಿಯಂತೆ ಇರುವ ನೀನು ಶ್ವೇತ ಬಣ್ಣವನ್ನೂ ಜಿಂಕೆಯಂತೆ ನೇತ್ರಗಳನ್ನೂ ದಿವ್ಯವಾದ ಮುಖವನ್ನೂ ಹಾಗೂ ರಶ್ಮಿಯಂತೆ ಹೊಳೆಯುವ ಕೂದಲನ್ನೂ ಹೊಂದಿರುವ ನಿನಗೆ ನನ್ನ ಚೇತನವನ್ನು ಅರ್ಪಿಸಿದ್ದೇನೆ" ಎಂದು ಬರೆಯುವುದರಿಂದ ಸಂತಸಗೊಂಡ ಅರ್ಚನಳು ಇದನ್ನು ಸಂಗೀತ ರೂಪದಲ್ಲಿ ಪೂರ್ಣಿಮೆಯ ದಿನ ಶಶಿಯನ್ನು ನೋಡುತ್ತಾ ಅದರ ಪಲ್ಲವಿಯನ್ನು ಹಾಡುತ್ತಾಳೆಂದೂ ಭ್ರಮಿಸುತ್ತಾನೆ. ಅವನು ಯಾರೆಂದು ತಿಳಿದುಕೊಳ್ಳಬೇಕೆ? ಅವನು ಬೇರೆ ಯಾರೂ ಅಲ್ಲ ಒಂದು ಪ್ರತಿಮೆ. ಇದಕ್ಕೆಲ್ಲಾ ಕಾರಣ ದೈವದ ಪ್ರೇರಣೆ.
end- collected someಟೈಮ್ in 2002