Wednesday, 1 January 2025

ನೀವೊದುವ ಮೊದಲು neevoduva modalu before you read

50+ articles are being uploaded shortly.WAIT and FOLLOW this Blog



This is a very small blog with 100+ short write-up.  updation/adding new topics ended on January 1, 2025. Thanks for reading.


I am sure the public will not get this blog as the name is so unique and unknown. In one way I am saving precious time for those who don't get this blog and read.😃😃 What you read in this blog is purely original and that of mine and not to be seen in other forums.


ಮೊದ್ಲೇ ಹೇಳ್ತಿದೀನಿ ನಂಗೆ ಬರ್ಯೆಕ್ಕೆ ಬರೋಲ್ಲಂತ.  ಆದ್ರಿಂದ ಕ್ಷಮೆಯಿರಲಿ.  Thanks ಇನ್ ಅಡ್ವಾನ್ಸ್.  ಮತ್ತೊಂದ್ ವಿಷ್ಯ, ಇಲ್ಲಿ ನೀವ್ ಓದೋದ್ದು ಎಲ್ಲೂ ಈವರೆಗೂ ಓದಿರಲ್ಲ, ಯಾಕೆಂದ್ರೆ ಈಗ್ಲೇ ಫರ್ಸ್ಟ್ ಟೈಂ ನೀವ್ ನೋಡ್ತಿರೋದು ಎಲ್ಲ್ಲಾ ಬರಹಗಳನ್ನು.  

ಅಲ್ಲಿ ಇಲ್ಲಿ ನೋಡಿದ್ದು, ಅವ್ರಿವ್ರ್ ಮನೇಲಿ ನಡೆದದ್ದು, ಯಾರೋ ಹಾಗೇ ಮಾತಾಡಿದ್ದನ್ನ ಕೇಳ್ ಸ್ಕೊಂಡಿದ್ದು,  ಮನಸ್ಸಿಗೆ ಹೊಳೆದದ್ದು, ಮತ್ತೇ  ಮನ್-ಸಿಗೆ ನಾಟಿದ್ದು  ಒಂದು ಚೀಟಿಯಲ್ಲಿ points ತರಹ  ಬರ್ದಿಡುವ  ಸ್ವಭಾವ ನಂದು.   ಬಹಳ ವರ್ಷಗಳ ಚೀಟಿಗಳು ಒಂದು ರಾಶಿ ಗುಡ್ಡೆ ಆದಾಗ ಒಂದ್ good day, ಏನಪ್ಪಾ ಮಾಡೋದು ಅಂತ ಯೋಚ್ಸಿ  ಯೋಚ್ಸಿ,  ಕೊನೆಗೂ ಈ ಎಲ್ಲ ಹಡಪಗಳನ್ನು ಒಂದೊಂದ್  ಹರಟೆ ತರಹ ಬರ್ದಿಡೋ  ನಿರ್ಧಾರವನ್ನು ತೆಗೆದ್ಕೊಂಡೆ.  ಇದೇ ಬರಹಗಳು  ಇಲ್ಲಿ ಒಂದರ್  ನಂತರ ಒಂದು  ಶಿರೋನಾಮೆಯಲ್ಲಿ ಕಾಣಿಸ್ತದೆ ನೋಡಿ.  ಕೆಲವು points ತಾನಾಗಿಯೇ ಕವನ ತರಹ ಆಗೋಯ್ತು.  ಯಾವ ಷಟ್ಪದಿ ಅಂತ ಕೇಳ್ಬೇಡಿ please. ಐದಾರು skit ತರಹ ಆಯ್ತು.  ಕೆಲವು ಇಂಗ್ಲೀಷಿನಲ್ಲೇ ಇದ್ರೆ ಚೆನ್ನ ಅಂದ್ಕೊಂಡು ಹಾಗೇ ಇಂಗ್ಲಿಷ್ನಲ್ಲೇ ಇವೆ.  ಮತ್ತೇ ಕೆಲವು ಹಿಂದೀಲಿವೆ.  

ಸಾಕಾಂತೀರ ನನ್ನ dialoguesಉ.   ಆಯ್ತು ರೀ... ಓಕೆ.   ಆದ್ರೆ ಒಂದೇ ಒಂದು ವಿಶ್ಯ ಇದೆ ನೋಡಿ,  ನಾನು ಕಳ್ ಕಳಿಯಿಂದ  ನಿಮ್ಮಲ್ಲಿ ಕೇಳ್ಕೊಳ್ಳುವುದೇನೆಂದರೆ ನನ್ನ ಲೇಖನಗಳಲ್ಲಿರುವ ತಪ್ಪುಗಳನ್ನು ಒಪ್ಪಲು ಮನಸ್ಸಿಲ್ಲದಿದ್ದರೂ ಒಪ್ಪಿ, ಕ್ಷಮಿಸಿ, ಮುಕ್ತ ಮನಸ್ಸಿನಿಂದ, ಮನಸ್ಸಿನಲ್ಲಿ ಮೀಸಲಿಟ್ಟಿರುವ ಹರಕೆಗಳಿಂದ ಹರಸಿ ಹಾರೈಸಿರೆಂದು ಹಠಮಾರಿಯಾಗಲ್ಲ, ಹಂಗೇ ಹೇಳ್ತಿದೀನಿ.   ಕಾಮೆಂಟ್ಸ್ ಮಾಡೋರ್ವು ಆಯಾ ಬರಹಗಳಲ್ಲೇ ಕಾಮೆಂಟ್ ಕಾಲಂ ನಲ್ಲಿ ಮಾಡಿ ಪ್ಲೀಸ್.   ಪಾಸಿಟಿವ್ ಮಾಡಿದ್ರೆ ತುಂಬಾ ಚೆನ್ನ ಅಲ್ವಾ ? 

ಹಂಗೇ ನಮ್ ಧಾರವಾಡ್ ಮಂದೀಗೆ ಹೇಳಿಕ್ ಹತ್ತಿನಿ, ನನ್ ಗೀಚಿದ್ದನ್ ಅಗ್ ದಿ   ಗಂಭೀರ್ ಆಗಿ ತಗೊಬ್ಯಾಡ್ರೀ, ಆನಂದ್ ತಗೊಳ್ರಿ,   ಆನಂದ್ ಆತಪಾ ಲಘುನ್ ಕಾಮೆಂಟ್ ಹಚರಿ.  ಸುತಾರಾಂ ಏನಾರ ಬ್ಯಾಸರ್ ಬಂದ್ರ ಇಲ್ಲಾ ಬ್ಯಾಡದ್ ಬರೆದಿದ್ರ ಹೊಟ್ಟ್ಯಾಗ್ ಹಾಕೊಳ್ರಿ.


ಅರೆ ಹಾ, ಇಲ್ಲಿ ಬರಹಗಳನ್ನು ಓದುತ್ತಿದ್ದಂತೆ ಒಂದು ಬರಹವನ್ನು ಇನ್ನೊಂದು ಬರಹಕ್ಕೆ ಹೋಲಿಸಲೇ ಬೇಡಿ. ಮತ್ತೇ ಬರಹಗಳಲ್ಲಿರುವುದಕ್ಕೆ ಮತ್ತು ನನ್ನ ಸ್ವಭಾವಕ್ಕೆ ಕನೆಕ್ಷನ್ ಕೊಡಲೇ ಬೇಡಿ. ನನ್ ಸ್ವಭಾವ ರಾಜಕಾರಿಣಿ ತರಹ, ಇವತ್ತೊಂದು ನಾಳೆ ಇನ್ನೊಂದು ನಂತರ ಮಗದೊಂದು ಇರುತ್ತೆ. ಒಂದು ಬರಹ ಓದಿ, ಇಷ್ಟ ಆಯ್ತೋ ತಕ್ಷಣ ಕಾಮೆಂಟ್ ಮಾಡಿ, ಟೈಮಿಲ್ಲ ಅಂದ್ರೆ, ಲೈಕ್ ಮಾಡಿ - ಆದ್ರೆ ಬ್ಲಾಗ್ನಲ್ಲಿ ಲೈಕ್ ಬಟನ್ ಇಲ್ಲ, ಬೇರೇ ಸೈನೂ ಇಲ್ಲ, ಆದ್ದರಿಂದ ಇಲ್ಲೇ ಐದು ತರಹದ ಚಿನ್ಹೆ ಕೊಡ್ತಾ ಇದೀನಿ. ಕಾಪಿ ಮಾಡಿ ಪೇಸ್ಟ್ ಮಾಡಿ ಪ್ಲೀಸ್ -     👍   ☝    😄    👎    ☹.   ಭಾಳ  ಮುಖ್ಯವಾದ್ ಪ್ರಾರ್ಥನೆ ನಿಮ್ಮಲ್ಲಿ - ಇನ್ನೊಂದ್ ಚಿನ್ಹೆ  ಅದೇ ನಮಸ್ಕಾರದ್ದು ಇದೆಯಲ್ಲ 🙏🙏 🙏🙏 ನೋಡಿದೀರಾ ತಾನೇ, ನಂಗೆ  ನೋಡೀ ನೋಡೀ ಸಾಕಾಗಿದೆ. ಪ್ಲೀಸ್ ಹಾಕ್ ಬ್ಯಾಡ್ರೀ. 

ಮತ್ತೇ, ಯಾರ್ಗೋ ಅಥವಾ ಯಾವ್ದೋ ಗ್ರೂಪ್ಗೋ ಕಾಪಿ ಪೇಸ್ಟ್ ಮಾಡ್ದಾಗ ನನ್ನ ಹೆಸ್ರನ್ನು ಸೇರ್ಸಿ ಪೇಸ್ಟ್ ಮಾಡಿ.  ಭಾಳ ವರ್ಷ್-ದು ಮತ್ತು ಭಾಳ ಕಷ್ಟ ಪಟ್ಟಿದ್ದೀನಿ ರೀ ಅದಕ್ಕೆ.   ಮತ್ತೇ...  
ಈ ನನ್ನ ಎಲ್ಲಾ ಬರಹಗಳನ್ನು ಓದಲು ನೀಲಿ ಲಿಂಕನ್ನು ಒತ್ತಿ. ಅಥವಾ scrolldown ಮಾಡಿದ್ರೆ TOPICS ಸಿಗುತ್ತೆ. ಮತ್ತೇ.... (ಇನ್ನೊಮ್ಮೆ?) ನಿಮಗೆ ಯಾರಾದರೂ ಫೋಟೋ ಕಳಿಸಿದಾಗ ಅವರ ವಯಸ್ಸು ತಿಳಿಯಲು ಎರಡು ಬೆರಳಿನಿಂದ ಅಗಲ (ZOOM) ಮಾಡಿದ ಹಾಗೆಯೇ ಈ ಬ್ಲಾಗ್ ನ  photo ನೋಡಲು photo ಒತ್ತಬೇಡಿ ಎರಡು ಬೆರಳಿನಿಂದ ಫೋಟೋ ZOOM ಮಾಡಿ, ಬರ್ಲಾ, ಮುಗಿಯಿತುವರಗೆ ಎನ್ ಬೇಕಾದ್ರೂ ಓದಿಕೊಳ್ಳಿ.  ನೀಲಿ ಲಿಂಕ್ ಗೆ--> ಕೆಳಗೆ ನೋಡಿರಿ 👇🏿👇 

-ಇಂತಿ ಸುರೇಶ್ ಹುಲಿಕುಂಟಿ 
end.


or

end

end. adding new topics are still there wait please.

.