Showing posts with label ಆಲೋಚನೆ-ಮದುವೆಯ ನಿಶ್ಚಯ matrimonial alliance. Show all posts
Showing posts with label ಆಲೋಚನೆ-ಮದುವೆಯ ನಿಶ್ಚಯ matrimonial alliance. Show all posts

Thursday, 10 December 2020

ಮದುವೆಯ ನಿಶ್ಚಯ matrimonial alliance

2020-2021 vontikoppal panchanga

thoughts on matrimonial alliance

(matrimonial alliance - ಒಂದು ಆಲೋಚನೆ. Time - ಪ್ರಸ್ತುತ - 2010+)

ಏನಿದು! ಒಂಟಿಕೊಪ್ಪಲ್ ಪಂಚಾಂಗದ ಮೂರ್ನಾಲ್ಕು ಪೇಜುಗಳನ್ನು ಇಲ್ಲಿ ಹಾಕಿದ್ದೀರ ಎಂದು ಕೇಳುತ್ತಿದ್ದೀರಾ? ನೀವು ಓದುತ್ತಾ ಹೋದಂತೆ ಅವುಗಳ ವಿವರ ಇಲ್ಲಿ  ಕೂಲಂಕುಷವಾಗಿ ವಿಮರ್ಶಿಸಲಾಗಿದೆ.

ಮಕ್ಕಳ ಮದುವೆಗೆ ಗಂಡು-ಹೆಣ್ಣಿನ ಜಾತಕಗಳು  ಕೂಡಿರಲೇ ಬೇಕಾದಂತಹ ನಿರ್ಧಾರ ಆ ತಂದೆತಾಯಿಗಳಿಗೆ ನಿಜಕ್ಕೂ ಒಂದು ದೊಡ್ಡ ಫಲಕಾರಿಯಾಗದ ಸಮಸ್ಯೆಯಾಗಿ ಕಾಡುವ ಪ್ರಶ್ನೆ. 

ಈಗ ಕಾಲ ಬದಲಾಗಿದೆಯಾದರೂ ಸಾಮಾನ್ಯ ಹಿಂದೂ ಕುಟುಂಬಗಳಲ್ಲಿ ಮತ್ತು ಮುಖ್ಯವಾಗಿ ಸಂಪ್ರದಾಯಸ್ತರ ಮನೆಗಳಲ್ಲಿ  ಮಕ್ಕಳ ಮದುವೆ ಯಾವಾಗ ಮಾಡಬೇಕೆಂದು ನಿರ್ಧರಿಸುವಲ್ಲಿ ತಂದೆತಾಯಿಯರ ಪಾತ್ರ ಬಹಳ ಜವಾಬ್ದಾರಿಯುತವಾಗಿರುತ್ತದೆ. ಇನ್ನು ಮಗಳು ಮಗನಕಿಂತ ಕಿರಿಯವಳಗಿದ್ದರೆ (ಸುಮಾರು 3 ವರುಷ ಅಥವಾ ಕಡಿಮೆ), ಮಗಳ ಮದುವೆಯಾಗುವ ತನಕ ಮಗನ ಮದುವೆಗೆ ಒಪ್ಪಿಗೆ ಇರುವುದಿಲ್ಲ. ಅತಿ ಮುಖ್ಯವಾಗಿ ನಮ್ಮ ದೇಶದಲ್ಲಿ "ನಾನು ಮದುವೆ ಆಗುತ್ತೇನೆ, ಹುಡುಗ/ಹುಡುಗಿಯನ್ನು ನನಗೆ ನೋಡಿ" ಎಂದು ಹಿರಿಯರ ಮುಂದೆ ಹೇಳುವ ಧೈರ್ಯ ಮಗಳು/ಮಗ ಮಾಡುವುದಿಲ್ಲ. ಹಾಗೆಯೇ ಈಗಿನ ಕಾಲದಲ್ಲಿ ಮದುವೆಗೆ ಹುಡುಗ/ಹುಡುಗಿಯ ಒಪ್ಪಿಗೆಯ ನಂತರವೇ ಹಿರಿಯರು ಕಾರ್ಯಪ್ರವೃತ್ತರಾಗುತ್ತಾರೆ. ಮಗ/ಮಗಳ ಒಪ್ಪಿಗೆಯು ಅತಿ ಮುಖ್ಯ.

ಇನ್ನು ಆಷಾಢ ಮಾಸ ಅಥವಾ ಧನುರ್ಮಾಸ ಇದ್ದ ಸಮಯದಲ್ಲಿ ಈ ಶುಭ ಕಾರ್ಯಕ್ಕೆ ನಿಲುಗಡೆ ಇದ್ದೇ ಇರುತ್ತದೆ. ತುಂಬಾ ರಪ ರಪಾಂತ  ಮಳೆ ಬೀಳುತ್ತಿದ್ದಾಗ ಅಥವಾ ಬಂಗಾಳ ಕೊಲ್ಲಿ/ಅರಬ್ಬೀ ಸಮುದ್ರದಲ್ಲಿ ಎದ್ದಂತಹ ಡಿಪ್ರೆಷನ್ ಸಮಯದಲ್ಲಿ ಹುಡುಗ/ಹುಡುಗಿ ಡಿಪ್ರೆಸ್ ಆಗಬಾರದೂ ಅಂತ ಆಗಲೂ ಈ ಕಾರ್ಯ ಸ್ಥಗಿತವಾಗಬಹುದು. ಇಷ್ಟಾದರೂ, ಒಂದು ವರುಷದಲ್ಲಿ ಇನ್ನು ಎಂಟು ತಿಂಗಳಾದರೂ ಉಳಿದಿದೆಯಲ್ಲ ಎಂದು ತಂದೆತಾಯಗಳಿಗೆ ಸಮಾಧಾನ! 

ಜಾತಕ ನೋಡಿ ಜಾತಕ ಕೂಡಿದೆಯಾ ಎಂದು ಹೇಳಲು ಮನೆ ಪುರೋಹಿತರೇ ಆಗಬೇಕು. ಇನ್ನೊಬ್ಬರ ಮೇಲೆ ವಿಶ್ವಾಸ ಸ್ವಲ್ಪ ಕಡಿಮೆ. ಆ ಕುಲಪುರೋಹಿತರು ಊರಿನಲ್ಲಿ ಇಲ್ಲವೆಂದರೆ ಅಷ್ಟು ದಿನ ಮುಂದೂಡಿಕೆಯಂತೂ ಸರ್ವೇ ಸಾಮಾನ್ಯ. ಮದುವೆಯ ವಿಷಯ ಬಹಳ ಮುಖ್ಯವಾದದ್ದು. ಆದ್ದರಿಂದ ಹಿರಿಯರು ಎಲ್ಲಾ ಹಂತಗಳಲ್ಲಿಯೂ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ.   

ಕಾಲ ಬದಲಾದಂತೆ ಈಗ ಅವರಿವರ ಸಹಾಯ ಕೂಡ ಬೇಡವಾಗಿ ಎಲ್ಲರೂ ಅಂತರ್ಜಾಲದ ಮೊರೆ ಹೋಗಿದ್ದಾರೆ. ಸಂಗಾತಿಯನ್ನು ಹುಡುಕುವ ಕೆಲಸವನ್ನು ಹುಡುಗ- ಹುಡುಗಿಯರೇ ಹಿರಿಯರ ಪರವಾಗಿ  kannadamatrimony.com ನಲ್ಲಿ ಹೆಸರನ್ನು ನೋಂದಾಯಿಸುವ ಮುಖಾಂತರ ಪ್ರಕ್ರಿಯೆಗೆ ತೊಡಗುತ್ತಾರೆ. ಪ್ರತಿ ವಾರದ ರಜಾ ದಿನಗಳಲ್ಲಿ ನೆಂಟಸ್ತಿಕೆ ಹುಡುಕಲು ಕಾರ್ಯಮಗ್ನರಾಗತ್ತಾರೆ. ಹುಡುಗನ/ಹುಡುಗಿಯ ಪ್ರಾಮುಖ್ಯತೆಗಳೇನು, ಯಾವ ಬಣ್ಣ ಇರಬೇಕು, ಎತ್ತರ ಎಷ್ಟಿರಬೇಕು, ತೂಕ ಎಷ್ಟಿರಬೇಕು, ಏನು ಓದಿರಬೇಕು, ಎಲ್ಲಿ ಕೆಲಸ ಮಾಡುತ್ತಿರಬೇಕು, ತಿಂಗಳ ಆದಾಯ ಎಷ್ಟು ಇರಬೇಕು, ವಯಸ್ಸಿನ ಅಂತರ ಎಷ್ಟಿರಬೇಕು, ಅಣ್ಣ ತಮ್ಮ ಅಕ್ಕ ತಂಗಿ ಎಷ್ಟು ಇರಬೇಕು, ಹವ್ಯಾಸಗಳು ಯಾವುವು, ಇನ್ನೂ ಮುಂತಾದುವುಗಳ ವಿಶ್ಲೇಷಣೆ ಮಾಡಿ ಸುಮಾರು 80 ರಿಂದ 90  ಅಭ್ಯರ್ಥಿಗಳನ್ನು ಪರಿಶೀಲಿಸಿದ ಮೇಲೆ  ಒಟ್ಟು ಇಪ್ಪತ್ತರಿಂದ ಇಪ್ಪತೈದು ಅಭ್ಯರ್ಥಿಗಳ ಪಟ್ಟಿಯನ್ನು  ಮಾಡುವವರು ಈ ಹುಡುಗ ಅಥವಾ ಹುಡುಗಿ. 

ನೆನಪಿರಲಿ - ಈ  25ರ ಪಟ್ಟಿ ಒಂದೇ ಸಮಯದಲ್ಲಿ ನಡೆಯುವುದಿಲ್ಲ. ಒಂದು ವರುಷದಲ್ಲಿ ಹಂತ ಹಂತವಾಗಿ ನಡೆಯುವ ಪ್ರಕ್ರಿಯೆ. ಈ ಒಂದು ವರುಷದಲ್ಲಿ ಆಗಿರುವ ಘಟನೆಗಳನ್ನು ಒಂದುಗೂಡಿಸಿದಾಗ ಸಿಗುವ ಸಾರಾಂಶ ಇಲ್ಲಿದೆ... ಮುಂದೆ ಓದಿರಿ.. 

ಹುಡುಗ/ಹುಡುಗಿ ತನ್ನ ತಂದೆ ತಾಯಿಗಳ ಕೈಗೆ ಪಟ್ಟಿಯನ್ನು ಕೊಟ್ಟಮೇಲೆ ಹಿರಿಯರ ಕಾರ್ಯ ಪ್ರಾರಂಭವಾಗುತ್ತದೆ. ಆ ಇನ್ನೊಂದು ಕುಟುಂಬಕ್ಕೆ  ದೂರವಾಣಿ  ಮುಖಾಂತರ ಮಾತನಾಡುತ್ತಾರೆ. ಉಭಯ ಕುಶಲೋಪರಿ  ಮಾತಿನ ಚಕಮಕದಲ್ಲಿ ಈ 25 ಕುಟುಂಬಗಳಲ್ಲಿ ಕನಿಷ್ಠ ಐದಾದರೂ ತಿರಸ್ಕಾರ ಆಗುತ್ತದೆ. ಕಾರಣ..

  1. ಗೋತ್ರ ಬೇರೆ ಇದೆಯಾ ನೋಡಬೇಕು. ಅಂದರೆ ಗೋತ್ರ ಬೇರೆ ಯಿದ್ದರೂ ಕೆಲವು ಗೋತ್ರಗಳು ಹೊಂದಾಣಿಕೆ ಆಗುವುದಿಲ್ಲ. ಉದಾಹರಣೆಗೆ ಭಾರದ್ವಾಜ ಗೋತ್ರದವರು ಆಂಗೀರಸ ಅಥವಾ ಭಾರಸ್ಪತ್ಯ ಅಥವಾ ಹರಿತಸ ಗೋತ್ರದವರನ್ನು ಮದುವೆ ಆಗುವಂತಿಲ್ಲ. ಇವರೆಲ್ಲ ಅಣ್ಣ- ತಮ್ಮ ತರಹ.    
  2. ಅಂತಸ್ತು ಸರಿಹೊಂದುತ್ತಿಲ್ಲ.
  3. ಎದುರು ಕುಟುಂಬ ಸರಿಯಾಗಿ ಮಾತನಾಡಲಿಲ್ಲ/ಸ್ಪಂದಿಸಲಿಲ್ಲ. 
  4. ಎದುರು ಕುಟುಂಬಕ್ಕೆ ಇಷ್ಟ ಆಗಿಲ್ಲ, ಆಸಕ್ತಿ ತೋರಿಸುತ್ತಾ ಇಲ್ಲ. 
  5. ಉತ್ತರ ಕರ್ನಾಟಕದವರು/ ಮಂಗಳೂರಿನವರು/ ಆಂಧ್ರದವರು/ ತಮಿಳು ನಾಡಿನಲ್ಲಿ ನೆಲೆಸಿದವರು - ಇವರೆಲ್ಲರ ಸಂಪ್ರದಾಯ ವಿಭಿನ್ನವಾಗಿರುವುದರಿಂದ ಹೊಂದಾಣಿಕೆಯ ಪ್ರಶ್ನೆ ಮೂಡಬಹುದು ಎಂಬ ವಾದ ಎರಡೂ ಕುಟುಂಬಗಳು ವ್ಯಕ್ತಪಡಿಸಬಹುದು.
ಈಗ ಉಳಿದದ್ದು 20. 

ಇವುಗಳಿಗೆ ಪುರೋಹಿತರು ಬರೆದಂತಹ ಮೂಲ ಪ್ರತಿ ಜಾತಕದ ಸ್ಕಾನ್ಡ್ ಕಾಪಿಯನ್ನು email/whatsapp ನಲ್ಲಿ ಕಳಿಸಲು ಕೋರಿಕೆ ಸಲ್ಲಿಸುತ್ತಾರೆ. ಹಾಗೆಯೇ ಇವರೂ ಅದೇ ತರಹ ಜಾತಕದ ಸ್ಕಾನ್ಡ್ ಕಾಪಿಯನ್ನು email/whatsapp ನಲ್ಲಿ ಕಳಿಸುವರು. ಬಂದಂತಹ ಜಾತಕಗಳನ್ನು ಕುಲ ಪುರೋಹಿತರಿಗೆ ಕೊಟ್ಟು ಈಗ ಎರಡೂ ಕುಟುಂಬಗಳ ಹಿರಿಯರು  ಫಲಿತಾಂಶಕ್ಕಾಗಿ ಕಾಯುತ್ತಾರೆ.

ಗಂಡು-ಹೆಣ್ಣಿನ ಜಾತಕಗಳು ಕೂಡಿದೆಯಾ ಎಂದು ತಿಳಿಯಲು ಒಂಟಿಕೊಪ್ಪಲ್ ಪಂಚಾಂಗದಲ್ಲಿ ವಿವರವಾಗಿ ಕೊಟ್ಟಿದ್ದಾರೆ. ಈ ವಿಷಯಗಳೆಲ್ಲ ಜ್ಯೋತಿಷಿಯವರಿಗೆ ಕಂಠಪಾಠ  ಇರುವುದರಿಂದ ಅವರು ಅದನ್ನು ನೋಡದಿರಬಹುದು. ಏನು ಈ ಪಂಚಾಂಗದಲ್ಲಿ ಕೊಟ್ಟಿರುವುದು, ಅದೇ ಇಲ್ಲಿ ಪ್ರಸಾಪ.

ಕೆಳಗಿನ ಎಲ್ಲಾ ಹಂತಗಳಲ್ಲಿ  ಜ್ಯೋತಿಷಿಯವರು ಹುಡುಗ ಮತ್ತು ಹುಡುಗಿಯ  ಜಾತಕಗಳ ಹೊಂದಾಣಿಕೆ  ಪರೀಕ್ಷಿಸಿ, ಒಪ್ಪಿಗೆ ಕೊಟ್ಟ ಮೇಲೆ, ಹುಡುಗ ಹುಡುಗಿಯ ಮುಖತಃ ಭೇಟಿಗೆ ದಿನ ನಿಶ್ಚಯವಾಗುತ್ತದೆ. 

ಹಂತ 1. ಎಲ್ಲಾ 20  ಜಾತಕಗಳ ಪರೀಕ್ಷೆ 
  • ಹುಡುಗನ ನಕ್ಷತ್ರ ಮತ್ತು ಹುಡುಗಿಯ ನಕ್ಷತ್ರ ಹೊಂದಿಸಲು ಗುಣ ಪದಕ ತಿಳಿಯಬೇಕು. ಇದಕ್ಕೆ 'ವಿವಾಹ ಘಟಿತಾರ್ಥ ಗುಣ ಪದಕ' ಎಂಬ ಪುಟದಲ್ಲಿ ನೋಡಬೇಕು.
  • 18 ಕ್ಕಿಂತ ಹೆಚ್ಚು ಗುಣ ಕೂಡಿರಬೇಕು.
  • ಆ ಪುಟದಲ್ಲಿ ತರಹೇವಾರಿ ಚಿಹ್ನೆಗಳಿವೆ, ಸರಿಯಾಗಿ ಗಮನಿಸಬೇಕು. rectangle ಚಿನ್ಹೆ ಸಿಕ್ಕಿಬಿಟ್ಟರೆ ವಿವಾಹ ಅಶುಭ.
ಹಂತ 1 ರಲ್ಲಿ ಕನಿಷ್ಠ  4/5 ಜಾತಕ ರದ್ದಾಗುತ್ತದೆ.

    ಹಂತ 2. ಇಲ್ಲಿ ಉಳಿದ 15 ಜಾತಕಗಳ ಪರೀಕ್ಷೆ 

    'ವಿವಾಹೋಪಯುಕ್ತ ದ್ವಾದಶ ಕೂಟಗಳು' ಎಂಬ ಪುಟದಲ್ಲಿರುವ ಹನ್ನೆರಡು ಪರೀಕ್ಷಗಳಲ್ಲಿ ತೇರ್ಗಡೆ ಆಗಬೇಕು. ಆ 12 ಪರೀಕ್ಷೆಗಳು  ಯಾವುವು ಅಂತೀರಾ? ಅದುವೇ  ದಿನಕೂಟ, ಗಣಕೂಟ, ಮಾಹೇಂದ್ರಕೂಟ, ಸ್ತ್ರೀ ದೀರ್ಘಕೂಟ, ಯೋನಿಕೂಟ, ರಾಶಿಕೂಟ, ಗೃಹಮೈತ್ರಿಕೂಟ, ವಶ್ಯಕೂಟ, ರಜ್ಜು ಕೂಟ, ವೇಧಕೂಟ, ವರ್ಣಕೂಟ ಮತ್ತು ನಾಡಿಕೂಟ. ಗೃಹಮೈತ್ರಿಕೂಟ ಅತಿ ಮುಖ್ಯ.

    ಹಂತ 2 ರಲ್ಲಿ ಕನಿಷ್ಠ  5 ಜಾತಕಗಳು  ಹೊಂದಾಣಿಕೆ ಆಗದಿರುವುದು ನಿಶ್ಚಿತ ಮತ್ತು ಸಂಶಯ ಬೇಡ.


    ಹಂತ 3. ಇಲ್ಲಿ ಉಳಿದ 10 ಜಾತಕಗಳ ಪರೀಕ್ಷೆ
    • ಜಾತಕ ಇನ್ನೂ ಆಳವಾಗಿ ಪರಿಶೀಲಿಸಬೇಕು. ಅಂಗಾರಕ ದೋಷದ ಬಗ್ಗೆ  ಗಮನ ಕೊಡಬೇಕು.  ಕುಜ ದೋಷದ ಜಾತಕ (मांगलिक) ಮತ್ತು ಕುಜದೋಷವಲ್ಲದಕ್ಕೆ  ಹೊಂದಾಣಿಕೆ ಇಲ್ಲ. 
    • ಗಣಗಳ ಮೈತ್ರಿ  ಸರಿ ಇರಬೇಕು. ರಾಕ್ಷಸ ಗಣದ ಜಾತಕಕ್ಕೆ ಮತ್ತು ಮನುಷ್ಯ ಅಥವಾ ದೇವ ಗಣ ಜಾತಕಕ್ಕೆ ತಾಳೆ ಆಗುವುದಿಲ್ಲ.
    ಹಂತ 3ರಲ್ಲಿ ಕನಿಷ್ಠ  3 ಜಾತಕ ಅಥವಾ 4 ಜಾತಕಗಳು ಕೂಡುವುದಿಲ್ಲ.

    ಇಡೀ ಒಂದು ವರುಷದ ಹುಡುಕುವಿಕೆಯಲ್ಲಿ ಈಗ ಉಳಿದದ್ದು ಐದೋ ಅಥವಾ  ಆರು ಜಾತಕಗಳು. 

    ಅಂತೂ ಈಗ ಇಷ್ಟಾದರೂ ಇದೆಯಲ್ಲ ಅಂತ ತಂದೆ-ತಾಯಿಗಳಿಗೆ ಸಮಾಧಾನ. ಹಿಂದೆ ದೊಡ್ಡವರ ಭೇಟಿ ಮೊದಲು, ನಂತರ ಹುಡುಗ-ಹುಡುಗಿಯ ಭೇಟಿ ಇತ್ತು. ಈಗ ಅದೆಲ್ಲವನ್ನು ತೆಗೆದು ನೆರವಾಗಿ ಒಂದೇ ಭೇಟಿ.

    ಭೇಟಿಯ ನಂತರ ಅದೆಷ್ಟೋ ಕಾರಣಗಳಿಂದ ಮದುವೆಗೆ ಸಮ್ಮತಿ ರದ್ದಾಗುವ ಬಗ್ಗೆ ಇಲ್ಲಿ ಪ್ರಸ್ತಾಪಿಸಿಲ್ಲ.

    ಏಕೋ ಮೂವತ್ತೆರಡಾದರೂ ಹುಡುಗನಿಗೆ ಮದುವೆ ಆಗಿಲ್ಲ, ಇಪ್ಪತ್ತೆಂಟಾದರೂ ಹುಡುಗಿಗೆ ಮದುವೆ ಆಗಿಲ್ಲ. ಕಾರಣ ಕೇವಲ ಹುಡುಗ ಅಥವಾ ಹುಡುಗಿ ಅಲ್ಲ. ಉಳಿದವರೂ ಇದಕ್ಕೆ ಜವಾಬ್ದಾರರು ಎಂಬುದನ್ನು ಹಿರಿಯರು ಯಾಕೋ ಒಪ್ಪಿಕೊಳ್ಳೋಕೇ ತಯಾರಿಲ್ಲ. 

    ಇಷ್ಟೆಲ್ಲಾ ನೋಡಿ ಮದುವೆಯಾದ ದಂಪತಿಗಳು ನಿಜವಾಗಿಯೂ ಸಂತೋಷದಿಂದ ಇರುತ್ತಾರಾ ಎಂಬುದು ಆ ಮದುವೆಯಾದ ದಂಪತಿಗಳ ವಿವೇಚನೆಗಳಿಗೇ ಬಿಡೋಣವೇ? 
    ***

    end- thoughts written sometime ಇನ್ December 2011

    .
    back to  

    end.


    .
    got this in uttara karnataka brahmanaru 


    'GRAHA MAITRI !' what science say February 28, 2021

    Remember the old saying?   - Men are from Mars!
                                                    Women are from Venus
    Please watch the short stunning video with sound from another planet!! It is remarkable!!

    The Perseverance rover of the National Aeronautics and Space Administration (NASA), which touched down on Mars on February 18, 2021 has sent some stunning photos and videos of the Red Planet.

    One of the videos taken by NASA’s Perseverance is now breaking the internet. Writer and digital content specialist James Holland has shared the 26-second long video on his Twitter handle.
    *******