Monday 30 November 2020

ಅವಸ್ಥೆ avasthe


 Imaginative poem
        ನಾನವಳನ್ನು ನೋಡಲು ತವಕಿಸುತಿದ್ದೆ
        ಆಫೀಸಿನ ರಜೆಗಾಗಿ ಕಾತರಿಸುತಿದ್ದೆ
        ಬಂದಿತು ಶನಿವಾರದಂದು ರಂಜಾನ್
        ಅಂದು ನೋಡಬಹುದೆನ್ನ ಜಾನ್



ಬಸ್ಸು ಹಿಡಿದಿದ್ದಯಾಯಿತು
ಸಿಗಲಿಲ್ಲ ಸೀಟು
ಪರವಾಗಿಲ್ಲ ಜೋರಿತ್ತು
ನನ್ನ ಹಾರ್ಟ್ನಬೀಟು

         ಸಮಯ ಮುಂದೆ ಸಾಗುತ್ತಿದೆ

         ಆದರೆ ಬಸ್ಸು ಸಾಗುತ್ತಿಲ್ಲ
         ಕಾರಣ ಕೇಳಲು ಮನಸ್ಸಿದೆ
         ಆದರೆ ಧೈರ್ಯ ಮಾತ್ರ ಇಲ್ಲ


ಕರ್ನಾಟಕ ಸಾರಿಗೆ

Monopoly ಆಗಿದೆ
ಹಣ ಪೋಲಾದಂತೆ
ಸಮಯ ಕೂಡ ಪೋಲಾಗಿದೆ


         ಅಷ್ಟರಲ್ಲಿ ಎದ್ದರು ಒಬ್ಬರು

         ಕಾರಣ ಯಾರೋ ಕರೆದರು
         ಬಂದಿತು ಜೀವ
         ತಿಂದಂತೆ ಮೇವ


ಕೊನೆಗೂ ಹೊರಟಿತು ಬಸ್ಸು

ಜೋರಾಗಿ ಕೇಳಿಸಿತು ಟ್ಟುಸ್ಸು
ಅಯ್ಯೋ ನನ್ನ ದುರದೃಷ್ಟ
ಬೇಡವಾಗಿತ್ತು ನನಗೀ ಕಷ್ಟ


         ಬೇಸರಿಸಿ ಬಸ್ಸಿಂದಿಳಿದೆ

         ಬೇರೆ ಬಸ್ಸಿಗಾಗಿ ಕಾಯಬೇಕಿದೆ  
         ಬೇರೆಲ್ಲ ಬಸ್ಸುಗಳು ಬರುತ್ತಿವೆ
         ನಮ್ಮೂರಿನವರಿನ್ನೂ ಕಾಯುತ್ತಿದ್ದಾರೆ


ಏನಿದು ಆಶ್ಚರ್ಯ!

ಬಂದಿಳಿದಳು ಸೌಂದರ್ಯ
ಇವಳೇ ಇವಳೇ ನನ್ನವಳು
ನನ್ನ ಹಾಗೆ ಊರಿನಿಂದ ಹೊರಟವಳು


         ತುಂಬಾ ಧನ್ಯವಾದ

         ಸಾರಿಗೆ ಸಂಸ್ಥೆಗೆ
         ಸರಿಪಡಿಸಿದಂತಹ
         ನನ್ನ ಅವಸ್ಥೆಗೆ
end- ನಡೆದದ್ದು ಅಲ್ಲ imagination written sometime ಇನ್ 2002

.
back to  

end.

.

No comments:

Post a Comment