Perfect explanation
Imagination - poem
ಬೆಳಕನ್ನು ಕಂಡಂತೆ
ಮುಂದೊಂದು ದಿನದ ಬಾಳಿನಾಸರೆಯಾ
ಮಗನಲ್ಲಿ ಕಂಡೆ
ಪುತ್ರರತ್ನನಿಗೆ ಏನೆಲ್ಲ
ಸವಲತ್ತುಗಳ ಧಾರೆ ಎರೆದೆ
ನಮಗೆಲ್ಲ ದಾರಿದೀಪನಾಗುವ
ದಿನಗಳನೇ ಕಾತರದಿಂದ ಕಾದೆ
ವಿದ್ಯಾವಂತನಾದಂತೆ
ಮಗನಲ್ಲಿ ಬದಲಾವಣೆಗಳನು ಕಂಡೆ
ಅವನ ಜೀವನದ ಶೈಲಿಯಲ್ಲಿ
ಮಾರ್ಪಾಟುಗಳನು ಕಂಡೆ
ಏರುತ್ತಿರುವ ಅಸುರಕ್ಷಿತ ದಿನಗಳಲಿ
ಇಳಿಯುತ್ತಿರುವ ತಂದೆ ತಾಯಿಯ ಮೇಲಿನ
ಪ್ರೀತಿ ವಿಶ್ವಾಸಗಳನು
ಕಾಣಲು ಇಷ್ಟವಿರದಿದ್ದರೂ ಕಂಡೆ
ಬಾಳಿನಾಸರೆಗೆಂದು
ಮಕ್ಕಳ ಏಳಿಗೆಗಳಲಿ
ಅವರ ಆಕಾಂಕ್ಷೆಗಳಲಿ
ನಿಮ್ಮ ಸ್ವಾರ್ಥವನ್ನು ಕಾಣದಿರಿ
ಕರ್ತವ್ಯ ಮಾತ್ರ ಪಾಲಿಸಿರಿ
end- elloo ನಡೆದದ್ದು ಅಲ್ಲ imagination written sometime ಇನ್ 2002
No comments:
Post a Comment