Imagination - poem
ನಾ ಅರಿಯದೆ
ಅವಳ ಮನದ ಆಕಾಂಕ್ಷೆಗಳನ್ನು
ನಾ ತಿಳಿಯದೆ
ಎನ್ನ ಮನಸ್ಸಿನಾ ಚಿಂತೆಗಳನ್ನೇ
ಅತಿ ಮುಖ್ಯವೆಂದು ಭಾವಿಸಿರಲು
ನಮ್ಮಿಬ್ಬರ ಮನಸ್ಸಿನ್ನಲ್ಲಿದ್ದ
ವಿಶ್ವಾಸವೆಂಬ ಮಡು
ಬಿರುಕು ಬಿಟ್ಟಿತಲ್ಲಾ
ಮೂವತ್ತರ ವಯಸ್ಸಿನಲ್ಲಿಯೂ
ಸಣ್ಣ ಪುಟ್ಟ ವಿಷಯಗಳಲ್ಲಿಯೂ
ಮನಸ್ತಾಪದ ಹೊಗೆ ಹರಡಿತಲ್ಲ
ಆ ಬಿರುಕು ಕಂದಕವಾಗಿದೆಯಲ್ಲ
ಕೊನೆಗೊಂದು ದಿನ
ಬೇಡವಾಗಿತ್ತು ಈ ವಿವಾಹ ಎಂದೆನಿಸಿ
ವಿಚ್ಛೇದನಕ್ಕೆ ಮೊರೆ ಹೋಗುವುದೇ
ಎಂದು ಯೋಚಿಸುತ್ತಿರುವಾಗಲೇ
'ಅಪ್ಪಾ' ಎಂದು ಮಗಳು ಕರೆದಿರಲು
'ಛೇ' ಎಂಥಹ ಯೋಚನೆ
ನನ್ನ ಮನದಲ್ಲಿ ಸುಳಿಯಿತಲ್ಲ
ಮೊದಲು ಆತ್ಮಾವಲೋಕನ
ಎಂದು ಮನಸ್ಸು ಹೇಳಿತು
ನಿನ್ನ ತಪ್ಪುಗಳನ್ನು ಮೊದಲು ತಿದ್ದಿಕೋ
ಮನಸ್ಸು ಪರಿ ಪರಿ ಹೇಳಿತು
ಮನೆ ಒಡತಿಯನ್ನ ನೀ
ತಿಳಿಯದಿರು ಅಪರಿಚಿತೆಯಂತೆ
ನೋಡದಿರು ನೀ ಕೆಲಸದಾಕೆಯಂತೆ
ಭಾವಿಸದಿರು ನೀ ಕಸಕಡ್ಡಿಯಂತೆ
ಅವಳ ಭಾವನೆಗಳ ನೀ
ಅರಿತಂತೆ ಸಿಗುವುದುತ್ತರ
ಆಗಸದಷ್ಟು ಎತ್ತರದ
ಮನಸ್ತಾಪದುತ್ತರ ..
end- elloo ನಡೆದದ್ದು ಅಲ್ಲ imagination written sometime ಇನ್ 2002
No comments:
Post a Comment