Imaginative one act drama
ಮುಂಸೀಫ್ ನ್ಯಾಯಾಲಯ
ಸಿವಿಲ್ ಕೇಸ್ ನಂ. ೧೧೧/೨೦೦೨
ಸೀತಾ ಸೀತಾ ಸೀತಾ
ಲಾಯರ್: ಇಲ್ಲಿ ಬನ್ನಿಯಮ್ಮ, ಈ ಕಟಕಟೆಯಲ್ಲಿ ನಿಲ್ಲಿರಿ. ಈ ಗೀತೆಯ ಮೇಲೆ ಕೈಯಿಟ್ಟು 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನು ಬಿಟ್ಟು ಮತ್ತೇನನ್ನು ಹೇಳುವುದಿಲ್ಲ' ಎಂದು ಪ್ರಮಾಣ ಮಾಡಿರಿ.
ಸೀತಾ: ಏನ್ರೀ ಲಾಯರ್ ರವರೇ ಆ ಗೀತಾಳಿಂದಲೇ ನಾನು ಇಲ್ಲಿಯವರೆಗೆ ಬರುವಂತಹ ಸ್ಥಿತಿ ಬಂದಿದೆ. ಆ ಗೀತಾಳ ಹೆಸರು ಮತ್ತೆ ಹೇಳ್ಬೇಡಿ
ಲಾಯರ್: ನಾನು ಈ ಭಗವದ್ಗೀತೆ ಪುಸ್ತಕದ ಮೇಲೆ ಕೈ ಇಟ್ಟುಕೊಂಡು ಪ್ರಮಾಣ ಮಾಡು ಎಂದಿದ್ದು ಅಷ್ಟೇ
ಸೀತಾ: ಆಯ್ತಾಯ್ತು, ನಾನು ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನು ಬಿಟ್ಟು ಮತ್ತೇನನ್ನು ಹೇಳುವುದಿಲ್ಲ
ಲಾಯರ್: ನಿಮ್ಮ ಹೆಸರು ?
ಸೀತಾ: ಇಗತಾನೇ ಮೂರು ಬಾರಿ ಕರೆದರಲ್ಲ, ಮತ್ತೇಕೆ ಕೇಳುತ್ತೀರಿ ?
ಲಾಯರ್: ಅದೆಲ್ಲ ಬೇಡ, ನಾನು ಕೇಳಿದ್ದಕ್ಕೆ ಉತ್ತರಿಸಿರಿ
ಸೀತಾ: ಸೀತಾ
ಲಾಯರ್: ನಿಮ್ಮ ಯಜಮಾನರ ಹೆಸರು ?
ಸೀತಾ: ಅಲ್ಲಿ ಎದುರಿಗೆ ನೀತಿದ್ದಾರಲ್ಲ, ಅವರೇ
ಲಾಯರ್: ನಾನು ಎಲ್ಲೀ ಅಂತ ಕೇಳಲಿಲ್ಲ, ನಿಮ್ಮ ಯಜಮಾನರ ಹೆಸರು ಹೇಳಿ
ಸೀತಾ: ಅದೇ ಸ್ವಾಮಿ ಅಲ್ಲಿ ಎದುರಿಗೆ ಇದ್ದರಲ್ಲಾ ಅವ್ರೇ
ಲಾಯರ್: ಅವರ ಹೆಸರು ?
ಸೀತಾ: -----
ಲಾಯರ್: ಹೆಸರು ಹೇಳಿ ?
ಸೀತಾ: ಅಯ್ಯೋ ಬಿಡಿ ಅವ್ರೇ
ಲಾಯರ್: ಅಮ್ಮ ತಾಯಿ, ಅವರ ಹೆಸರು ?
ಸೀತಾ: ನಾನೇಕೆ ನಿಮ್ಮ ತಾಯಿ ಅಮ್ಮ ಆಗುತ್ತಿನಿ. ನೀವೇ ನನಗಿಂತ ದೊಡ್ಡವರಿದ್ದೀರಲ್ಲ
ಲಾಯರ್: ಅಯ್ಯೋ... ನಾನೇನ್ ಮಾಡ್ಲಿ ಈಗ ?
ಸೀತಾ: ಲಾಯರ್ ಗಿರಿ ನಮ್ಮ ಯಜಮಾನರ ಪರ ಮಾಡ್ತಿದ್ದೀರಲ್ಲ, ಸಾಕಲ್ಲವಾ ?
ಲಾಯರ್: Your Honour, ಸ್ವಲ್ಪ ಸಹಾಯ ಮಾಡಿ Sir
ಜಡ್ಜ್: ಏನಮ್ಮ, ಲಾಯರ್ ಕೇಳಿದ್ದಕ್ಕೆ ಸರಿಯಾಗಿ ಉತ್ತರ ಕೊಡಿ
ಸೀತಾ: ನಮ್ಮ ಕಡೆ ಯಜಮಾನರ ಹೆಸರು ಹೇಳೋದಿಲ್ಲ
ಲಾಯರ್: ಆದ್ರೆ ಇಲ್ಲಿ ಹೇಳಲೇಬೇಕಮ್ಮ
ಸೀತಾ: ದಶರಥನ ಮೊದಲನೆಯ ಮಗ
ಲಾಯರ್: ದಶರಥನ ಮೊದಲನೆಯ ಮಗನ ಹೆಸರು ?
ಸೀತಾ: ಅಷ್ಟೂ ಗೊತ್ತಿಲ್ಲವೇ ನಿಮಗೆ ? ನೀವೆಂಥವರು ?
ಲಾಯರ್: ನನಗೆ ಗೊತ್ತಿದೆ. ಆದ್ರೆ ಇಲ್ಲಿ ಕೇಳಬೇಕಲ್ಲ
ಸೀತಾ: ಗೊತ್ತಿದ್ದ ಮೇಲೆ ನನ್ನನ್ನು ಯಾಕೆ ಕೇಳ್ತೀರಾ ?
ಲಾಯರ್: ಅಯ್ಯೋ ರಾಮ ರಾಮ ರಾಮ
ಸೀತಾ: ಅದೇ ಅದೇ ನಮ್ಮ ಯಜಮಾನರ ಹೆಸರು
ಲಾಯರ್: ಅಯ್ಯೋ your honour, ನನಗೆ ಮಾತ್ರ ಆಗೋದಿಲ್ಲ,ನಾನು ಈ ಕೇಸನ್ನು ಮುಂದುವರೆಸ ಲಾಗದಿದ್ದಕ್ಕೆ ಕ್ಷಮೆ ಕೇಳುತ್ತೀನಿ. ನಾನು ಪಡೆದ fees ನ್ನೂ ಸಹ ವಾಪಸ್ಸು ಕೊಡಲು ರೇಡಿಯಿದ್ದೀನಿ.
ರಾಮ: ಓಯ್ ಲಾಯರ್ ರವರೇ, ನಾನು ಕೊಟ್ಟ ಫೀಸ್ ನನಗೆ ಬೇಡಾ. ಇವಳಿಂದ ನನಗೆ ಮುಕ್ತಿ ಕೊಡಿಸ್ತ್ತೀನಿ, ಹಾಗೆ ಹೀಗೆಂತ ಹೇಳಿ ನೀವೇ ಮುಕ್ತಿ ಕೇಳ್ತಿದ್ದೀರಲ್ಲ. Your Honour, ಇದಕ್ಕೆ ಏನು ಶಿಕ್ಷೆ ಇವರಿಗೆ ಕೊಡ್ತಿರೋ ನೀವೇ ಕೊಡಿ
ಜಡ್ಜ್: ರೀ ಪ್ರಾಸಿಕ್ಯೂಟರ್, ಈ ಲಾಯರ್ ಮೇಲೆ ಕೇಸ್ ಹಾಕರಿ
ಸೀತಾ: (ಗಂಡನ ಕಡೆ ನೋಡ್ತಾ) ರೀ ಸುಮ್ನೆ ನಾನು ಹೇಳಿದ್ದಂಗೆ ಕೇಳ್ಕೊಂಡ್ ಮನೇಲಿ ಬಿದ್ದಿರಿಂತ ನಾನು ನಿಮ್ಗೆ ಗಿಳಿಗ್ ಹೇಳದಂಗೆ ಹೇಳ್ದೆ. ಈಗ ನೋಡಿದ್ರಲ್ಲ, ಮನೆಗ್ ಬನ್ನಿ, ಅದ್ಯಾವ್ ಲಾಯರ್ ಹತ್ತರ ಹೋಗ್ತೀರೋ ನಾನೂ ನೋಡೇ ಬಿಡ್ತೀನಿ
ರಾಮ: ನನ್ನ ಅದೃಷ್ಟಾನೇ ಸರಿಯಿಲ್ಲ. Your Honour, ದಯವಿಟ್ಟು ಲಾಯರ್ ಮೇಲೆ ಕೇಸ್ ಹಾಕದಿದ್ದರೂ ಪರವಾಗಿಲ್ಲ. ನನ್ನ ಮೇಲೆ ದಯೆ ತೋರಿ ಯಾವುದಾದ್ರೂ ನನ್ ಮೇಲೇ ಕೇಸ್ ಹಾಕಿ ನನ್ನ ಜೈಲಿಗೆ ಕಳಿಸಿ ಬಿಡಿ. ಮನೆಗೆ ಮಾತ್ರ ವಾಪಸ್ಸು ಕಳಿಸ್ ಬೇಡಿ
ಜಡ್ಜ್: ಪೊಲೀಸ್.. ಇವರನ್ನು ಕರೆದುಕೊಂಡು ಹೋಗಿ ಹೊರಗೆ ಬಿಟ್ಟು ಬನ್ನಿ. ಮುಂದಿನ ಕೇಸ್ ಯಾರದ್ದು ?
ರಾಮ: Your Honour, please ಬೇಡಾ, ನನ್ನನ್ನು ನರಕಕ್ಕೆ ಕಳಿಸಬೇಡಿ, ಸಾರ್ ಸಾರ್ ದಯಮಾಡಿ ದಯೆ ತೋರಿ
curtain closes..
end- imagination written sometime ಇನ್ 2002
No comments:
Post a Comment