Tuesday 1 December 2020

ಸೌಂದರ್ಯ soundarya


Imaginative story

ಸೌಂದರ್ಯ - ಕಥೆ 
ಎರಡನೆಯ ಪ್ರಿ ಯೂನಿವರ್ಸಿಟಿಯಲ್ಲಿ ಶೇಖಡಾ ೮೦ ರಷ್ಟು ಅಂಕಗಳನ್ನು ಗಳಿಸಿದ್ದರೂ ನಾನು ಇಂಜಿನೀರಿಂಗ್ ಗೆ ಸೇರಲು ನನ್ನ ಮನಸ್ಸು ಅಷ್ಟೇನು ಬಯಸಲಿಲ್ಲವಾದದ್ದರಿಂದ ನಾನು ಮೊದಲನೆಯ B.Sc ಗೆ ಸೇರಿದೆ.  ಇನ್ನೊಂದು ಕಾರಣ ನಮ್ಮ ತಂದೆಯವರು ಬಡ ಕುಟುಂಬದಿಂದ ಬಂದವರಾಗಿದ್ದು ಅವರಿಗೆ ಸುಮ್ಮನೆ ಹೊರೆಯಾಗಲು ನನ್ನ ಮನಸ್ಸು ಒಪ್ಪಲಿಲ್ಲ.  ಮೇಲಾಗಿ  B.Sc ಗೆ ಸೇರಿದರೆ scholarship ಸಿಗುವುದು ಖಂಡಿತವಾಗಿತ್ತು ಮತ್ತು ನನಗೆ ಅದರ ಅವಶ್ಯಕತೆಯಿತ್ತು.  ಮತ್ತೆ ನನಗೆ M.Sc ಮಾಡಿ Net ಪರೀಕ್ಷೆ ತೆಗೆದುಕೊಂಡು lecturer ಅಗಬೆಂಕೆಂಬ ಮನಸ್ಸಿತ್ತು. ನನ್ನ ಅಣ್ಣ ಕೂಡ ಇಂಜಿನೀಯರ್ ಮುಗಿಸಿ ಕೆಲಸಕ್ಕೆ ಸೇರಿ ಒಂದು ವರ್ಷವಾಗಿತ್ತು.  ಆದರೆ ನನ್ನ ಸ್ವಾಭಿಮಾನದ ಕಾರಣದಿಂದ ಅವನ ಸಹಾಯ ತೆಗೆದುಕೊಳ್ಳಲು ನನ್ನ ಮನಸ್ಸು ಒಪ್ಪುತ್ತಿರಲಿಲ್ಲ.

ತರಗತಿಗಳು ಪ್ರಾರಂಭವಾಗಿ ಸುಮಾರು ಏಳೆಂಟು  ದಿನಗಳಾಗಿರಬಹುದು.  Class ಇಲ್ಲದ ಸಮಯದಲ್ಲಿ ನನ್ನ ಆಪ್ತ ಸ್ನೇಹಿತರಿಬ್ಬರ ಜೊತೆಗೆ college ನ ಮುಖ್ಯದ್ವಾರದ ಹೊರಗೆ ನಿಲ್ಲುತ್ತಿದ್ದೆವು.  ಕಾಲೇಜಿಗೆ ಬರುವ ಎಲ್ಲಾ ಹುಡುಗಿಯರ ಮೇಲೆ ನಮ್ಮ ಕಣ್ಣುಗಳು ತಾನಾಗಿಯೇ ಕೇಂದ್ರೀಕೃತವಾಗಿದ್ದವು.  Principal, Lecturers  ಮತ್ತು ಮನೆಯ ಹಿರಿಯರ ಭಯದಿಂದ ಹುಡುಗಿಯರ ಮುಂದೆ ಯಾವ comments ಗಳನ್ನು ಮಾಡದೆ ಸಭ್ಯತೆ ತೋರಿದರೂ, ನಮ್ಮ ಯೋಚನೆಗಳೆಲ್ಲ ಯಾವುದಾದರೂ ಹುಡುಗಿಯ ಜೊತೆಗೆ ಯಾವಾಗ ಸ್ನೇಹ ವಾಗುತ್ತೇ ಎಂದಿತ್ತು.  

ನನ್ನ ಆಪ್ತ ಸ್ನೇಹಿತರಿಬ್ಬರ ಜೊತೆಗಿನ ಸ್ನೇಹ ಕೇವಲ ಕಾಲೇಜಿನ ಓದಿಗೆ ಸೀಮಿತವಾಗಿರದೆ ಒಬ್ಬರಿಗೊಬ್ಬರು ಧೈರ್ಯ ತುಂಬುವುದು, ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ನಮ್ಮ ಸ್ನೇಹ ನಿರ್ಮಲವಾಗಿ ಗಾಢವಾಗುತ್ತ ಹೋಗಿತ್ತು.  ಪ್ರಿ ಯೂನಿವರ್ಸಿಟಿಯಲ್ಲಂತೂ ಯಾವುದೇ ಹುಡುಗಿಯ ಸ್ನೇಹ ಮಾಡಲಿಲ್ಲ, ಈ ವರ್ಷವಾದರೂ ಸ್ವಲ್ಪ ಸಾಧನೆ ಮಾಡಬೇಕೆಂದು ನನ್ನ ಇಂಗಿತವನ್ನು ಸ್ನೇಹಿತರ ಮುಂದಿಟ್ಟೆ.  ಕೂಡಲೇ ಸ್ನೇಹಿತರಿಬ್ಬರೂ ಏನು ಸಹಾಯ ಬೇಕೆಂದರೂ ಮಾಡಲು ಸಿದ್ದವೆಂದರು.  

ಮಾರನೆಯ ದಿನ ಶನಿವಾರ ಬೆಳಿಗ್ಗೆ ಕ್ಲಾಸು ಪ್ರಾರಂಭವಾಗುವ ಮುಂಚೆ ಎಂದಿನಂತೆ ಕಾಲೇಜಿನ ಹೊರಗಡೆ ಹಾಗೆಯೇ ಹರಟೆ ಹೊಡೆಯುತ್ತ ನಿಂತಿದ್ದೆವು.  ಆಗತಾನೆ ನಾನು ಮನದಲ್ಲೇ ಸೃಷ್ಟಿಸಿದ್ದ ಸೌಂದರ್ಯ ನಿಜವಾಗಲೂ ರಿಕ್ಷಾದಿಂದ ಅವಳ  ತಂದೆಯ ಜೊತೆಗೆ ಕೆಳಗಿಳಿದಾಗ ನನ್ನ ಕಣ್ಣು ಅವಳನ್ನು ನೋಡಿದಾಗ ನನ್ನ ಮನ ಮಿಡಿಯಿತು.  ಸೌಂದರ್ಯಾಳ ತಂದೆಯವರು ನನ್ನ ನೋಡಿ ನಕ್ಕಾಗ ನನ್ನ ಸ್ನೇಹಿತರಿಬ್ಬರೂ ದಂಗಾದರು.  ಸೌಂದರ್ಯಳ ತಂದೆಯವರನ್ನು  ನನ್ನ ತಂದೆಯವರು ಮಾರುಕಟ್ಟೆಯಲ್ಲಿ ಸಿಕ್ಕಾಗ ಮಾತನಾಡಿಸಿದ ನೆನಪು ನಮ್ಮಿಬ್ಬರಿಗೂ ಇತ್ತು.  ಕಾರಣ ಅಷ್ಟೇ.  ಸೌಂದರ್ಯಳ ತಂದೆಯವರಿಂದ  ಸೌಂದರ್ಯ ಮೊದಲನೆಯ B.Sc ಗೆ ನನ್ನದೇ combination ತೆಗೆದುಕೊಂಡು ಸೇರಿದ್ದಾಳೆಂದು ತಿಳಿಯಿತು ಮತ್ತು ಸೌಂದರ್ಯಳನ್ನು ನನಗೆ ಪರಿಚಯಿಸಿದಾಗ ಅವಳ ಹೆಸರನ್ನು ನೆನಪಿಡಲು ಇಷ್ಟಪಡದೇ ನಾನವಳಿಗೆ ಸೌಂದರ್ಯವೆಂದು ನಾಮಕರಣ ಮಾಡಿದ್ದೆ.    'Welcome to my class ಇನ್ನು ಹದಿನೈದು ನಿಮಿಷಗಳಲ್ಲಿ Physics lecture ಪ್ರಾರಂಭ' ಎಂದು ಸೌಂದರ್ಯಳಿಗೆ ಹೇಳಿದಾಗ ಅವರಿಬ್ಬರೂ ಪ್ರಿನ್ಸಿಪಾಲ್ ರನ್ನು ಭೇಟಿ ಮಾಡಲು ನನಗೆ ಬೈ ಹೇಳಿ ಹೊರಟರು.  

ನನ್ನನ್ನೇ ಗಮನಿಸಿದ ನನ್ನ ಆಪ್ತ ಸ್ನೇಹಿತರು 'ಏನಮ್ಮ ನಿನ್ನ ಅದೃಷ್ಟ ಖುಲಾಯಿಸಿತಲ್ಲ' ಎಂದಾಗ ನಾಚಿ ನೂರಾದೆ.  ಸ್ನೇಹಿತರಿಬ್ಬರೂ 'ನಿನ್ನ problem solve ಆದಹಾಗೆ, ಮತ್ತೇ ನಿನಗೇನಾದರೂ ಸಹಾಯ ಬೇಕಾದರೂ ನಾವು ಸಿದ್ದ' ಅಂದಾಗ ಸಧ್ಯ ಅವರಿಬ್ಬರೂ ಇವಳ ಹಿಂದೆ ಇಲ್ಲವಲ್ಲ ಎಂಬ ಸಂತೋಷವಾಯಿತು.  

ದಿನದ ಯಾವ ಪಾಠವೂ ತಲೆಗೆ ಹೋಗದೆ ಕೊನೆಯ ಕ್ಲಾಸ್ ನಿಂದ ನನ್ನ ಸೌಂದರ್ಯ ಹೊರಗೆ ಬಂದಾಗ ಅವಳನ್ನು ಮಾತನಾಡಿಸಲು 'How do you feel about the class ?' ಎಂದು ಕೇಳಿದೆ.  ಅವಳೇನೂ ಹೇಳಲು ಇಚ್ಚಿಸದೆ ಸುಮ್ಮನೆ ನಕ್ಕಳು.  'ನಿಮಗೆ notes ಬೇಕಿದ್ದರೆ ನಾನು ಕೊಡುವೆ'   ಎಂದಾಗ ' No thank you' ಎಂದು ಹೇಳಿದಾಗ ಏನೂ ಹೇಳಲು ತೋಚದೆ 'bye, see you on Monday' ಎಂದು ವಿದಾಯ ಹೇಳಿದೆ. 'yes' ಅಂದಿದ್ದರೆ ಹಾಗೇ ಮಾತು ಮುಂದುವರೆಯು ತ್ತಿತ್ತೇನೋ.  

ನನ್ನ ಕ್ಲಾಸ್ಸಿನಲ್ಲಿ ಇರುವ ಇತರರು ಏನಪ್ಪಾ ಇವ್ನು ಆ ಹುಡುಗಿ ಬಂದ ಮೊದಲನೇ ದಿನಾನೇ line ಹೊಡೆಯಲು ಹೊರಟಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದಾಗ ನನ್ನ ಸ್ನೇಹಿತರಿಬ್ಬರೂ, ಅವಳು ಅವನಿಗೆ distant relative ಎಂದು ಹೇಳಿದ್ದು ನನಗೆ ಕೇಳಿಸುತ್ತಿತ್ತು.  

ಮನೆಗೆ ಹೋಗಿ ಪುಸ್ತಕಗಳನ್ನು table ಮೇಲೆ ಬಿಸಾಡಿ, ಮುಖ ತೊಳೆದು ತಿಂಡಿ ತಿಂದು ಕಾಫಿ ಕುಡಿದು ಸಂಜೆ ಹಾಗೆಯೇ ತಿರುಗಾಡಲು ಹೊರಟೆ.  ಎಲ್ಲಿಗೆ ಹೋಗುತ್ತಿದ್ದೀನಿ ಎನ್ನುವ ಪರಿವೇ ಇಲ್ಲದೆ ಸುಮ್ಮನೆ ಒಬ್ಬನೇ ನಡೆಯುತ್ತಿದ್ದೆ. ಮನಸ್ಸಿನಲ್ಲಿ ಏನೇನೋ ಯೋಚನೆಗಳು.  ಸೋಮವಾರ ನಾನು ನನ್ನ ಸೌಂದರ್ಯಳನ್ನು ಹೇಗೆ ಭೇಟಿ ಮಾಡಬೇಕು, ಭೇಟಿಯ ಕಾರಣ ಎನಿರಬೇಕು, ಏನು ಹೇಳಬೇಕು ಅವಳಿಗೆ, ನಂತರದ ಭೇಟಿಗಳಿಗೆ ಏನೇನು ಮಾತನಾಡಬೇಕು, ಅದಕ್ಕವಳು ಏನು ಉತ್ತರಗಳನ್ನು ಕೊಡಬಹುದು, ಆ ಉತ್ತರಗಳಿಗೆ ನನ್ನ ಪ್ರತ್ಯುತ್ತರಗಳೇನಿರಬೇಕು, ಇಂದಿನ ತರಹ ಅರ್ಧ ನಿಮಿಷದಲ್ಲೇ ಮಾತು ಮುಗಿಸಲು ಬಿಡಬಾರದು, ಅವಳು ಪ್ರತಿನಿತ್ಯ ಸಂಜೆ ಯಾರ್ಯಾರ ಮನೆಗಳಿಗೆ ಹೋಗುತ್ತಾಳೆ, ಅವಳ ಮನೆ ನನ್ನ ಮನೆಯಿಂದ ಎಷ್ಟು ದೂರವಿರಬಹುದು, ನಾನು ಹೇಗೆ ಅವಳ ಮನೆಗೆ ಹೋಗಬಹುದು, ಅವಳ ಮನೆಗೆ ಕರೆಯುವ ಹಾಗೆ ಏನನ್ನು ಮಾಡಬೇಕು, ಅವಳು ಪ್ರತಿ ಗುರುವಾರ ರಾಘವೇಂದ್ರ ಸ್ವಾಮಿಯ ಗುಡಿಗೆ, ಶನಿವಾರ ಮಾರುತಿ ಗುಡಿಗೆ  ಹೋಗುತ್ತಾಳೋ, ಹೋದರೆ ಯಾವ  ಜಾಗದಲ್ಲಿರುವ ಯಾವ ಗುಡಿಗೆ ಹೋಗುತ್ತಾಳೆ, ಎಷ್ಟು ಹೊತ್ತಿಗೆ ಹೋಗುತ್ತಾಳೆ, ಯಾರ ಜೊತೆಗೆ ಹೋಗುತ್ತಾಳೆ, ನಾನು ಅಲ್ಲಿಗೆ ಹೋಗಿ ಮಾತನಾಡಿಸಿದರೆ ಅವಳ ಜೊತೆಗಿರುವವರಿಂದ ಏನಾದರೂ ತೊಂದರೆಗಳು ಇವೆಯೇ, ಇವಳ ಸ್ನೇಹಿತೆಯರು ಯಾರ್ಯಾರು, ಇವಳು ಅವರ ಮನೆಗೆ ಹೋಗುತ್ತಾಳೋ ಅಥವಾ ಅವರೇ ಇವಳ ಮನೆಗೆ ಬರುತ್ತಾರೋ, ಯಾವ ಬಳೆ ಅಂಗಡಿ, ಯಾವ fancy shopಗೆ  ಹೋಗುತ್ತಾಳೆ, ಅವಳ interests ಏನೇನು, ಏನು ಮಾಡಿದರೆ ನನ್ನ ಸ್ನೇಹವನ್ನು ಗಟ್ಟಿ ಮಾಡಿಕೊಳ್ಳಬಹುದು, ಏನೆಲ್ಲಾ  ಯೋಚನೆಗಳು ತಲೆಯಲ್ಲಿ ಹಾದುಹೋಗಿ ಎಲ್ಲಿಗೆ ನಡೆಯುತ್ತಿದ್ದೇನೆ ಎನ್ನುವುದೇ ಗೊತ್ತಾಗಲಿಲ್ಲ.  ಮನೆಗೆ ವಾಪಸ್ಸು ಬಂದಾಗ ಆಗಲೇ ರಾತ್ರಿ ಎಂಟು ಗಂಟೆಯಾಗಿತ್ತು.  ಏನೂ ಓದಲು ಮನಸ್ಸಿಲ್ಲ, ಊಟ ಕೂಡ ಸೇರುತ್ತಿಲ್ಲ.  ಹಾಸಿಗೆಮೇಲೆ ಹಾಗೆ ಹೊರಳಾಡುತ್ತ ನಿದ್ರಾ ದೇವಿಯ   ಆಹ್ವಾನ ಎಷ್ಟು ಹೊತ್ತಾದರೂ ಬರಲೇ ಇಲ್ಲ.  ಬರೀ ಯೋಚನೆ, ಹೀಗೆ ಮಾಡಬೇಕು, ಹಾಗೆ ಮಾಡಬೇಕು, ಹೀಗಾದರೆ ಹೇಗೆ...  ಕೊನೆಗೂ ರಾತ್ರಿ ನಿದ್ರೆ ಬಂದದ್ದು ಗೊತ್ತಾಗಲಿಲ್ಲ.   

ನಮ್ಮ ಮನೆಯ ದೊಡ್ಡ ಗಡಿಯಾರ ಬೆಳಿಗ್ಗೆ ಎಂಟು ಹೊಡೆದಾಗ ನನಗೆ ಎಚ್ಚರ ತಂದು ನನ್ನ ಹೃದಯಕ್ಕೇ ಪೆಟ್ಟು ಬಿದ್ದಂತಾಗಿತ್ತು.  ಛಕ್ಕನೆ ಕಣ್ಣು ಬಿಟ್ಟೆ.  ಅಮ್ಮ ಎದುರಿಗೆ ನಿಂತು 'ಎಷ್ಟು ಸಲ ಎಬ್ಬಿಸಬೇಕು ನಿನ್ನನ್ನು ೨೦ ನಿಮಿಷದಲ್ಲಿ ready ಆಗು' ಎಂದು ಆಜ್ಞಾಪಿಸಿದಾಗ  ಏನೂ ಮಾತನಾಡದೆ ಬಚ್ಚಲು ಮನೆಗೆ ನಡದೆ.  

ರಾಹುಕಾಲ ಸಂಜೆ ೪.೩೦ ಯಿಂದ ಪ್ರಾರಂಭವೆಂದು ಬೆಳಿಗ್ಗೆಗೇ programನ್ನು ಹಿಂದೂಡಿದ್ದರು.  ನನ್ನ ತಂದೆ, ತಾಯಿ, ಅಣ್ಣ ಮೂರೇ ಜನರಾಗುವುದರಿಂದ ಒಳ್ಳೆಯ ಕಾರ್ಯಕ್ಕೆ ನನ್ನನ್ನು ಕರೆದುಕೊಂಡು ಹೋಗಲು ನಿರ್ಧರಿಸಿದ್ದರು.  ನನಗೆ ಮನಸ್ಸಿಲ್ಲದಿದ್ದರೂ ತಂದೆಯ ಮಾತುಗಳನ್ನು ಎದುರಿಸಲು ಮನಸ್ಸಿಲ್ಲದೆ ರೆಡಿಯಾದೆ.  

ಬೆಳಿಗ್ಗೆ ಒಂಬತ್ತೂ ವರೆಗೆ ಸರಿಯಾಗಿ  taxi ಮನೆಯ ಮುಂದೆ ಬಂದು ನಿಂತಿತು.  ಮನಸ್ಸಿನಲ್ಲಿ ಇನ್ನೂ ಸೌಂದರ್ಯಳ ನೆನಪೇ ಇದ್ದಿದ್ದರಿಂದ ಏನೂ ಮಾತನಾಡದೆ ಸುಮ್ಮನೆ ಎಲ್ಲರ ಜೊತೆಗೆ ಟ್ಯಾಕ್ಸಿಯಲ್ಲಿ ಕುಳಿತೆ.  ಐದೇ ನಿಮಿಷದಲ್ಲಿ ಟ್ಯಾಕ್ಸಿ ಇನ್ನೊಂದು ಮನೆಯ ಹೊರಗೆ ನಿಂತಿತ್ತು, ಹಾಗೆಯೇ ಆ ಮನೆಯ ಮುಂದೆ ನಮ್ಮ ಬರುವಿಕೆಗಾಗಿ ಕಾಯುವಂತೆ ಮನೆಯ ಯಜಮಾನಿಕೆ ನಿಂತಿದ್ದರು.  ನಮ್ಮನ್ನು ಬನ್ನಿ ಒಳಗೆ ಎಂದೂ ಆಹ್ವಾನಿಸುತ್ತ ಮನೆಯ ಯಜಮಾನರನ್ನು ಕರೆದರು. ಮನೆಯ ಯಜಮಾನರು ಹೊರಗೆ ಬಂದು ನಿಂತರು.  ಅವರನ್ನು ನೋಡಿದಾಗ ನನ್ನ ಮನಸ್ಸಿನಲ್ಲಿ ಆಘಾತವಾಗಿ ಸ್ಮೃತಿ ತಪ್ಪಿದವನಹಾಗೆ ಆಗಿತ್ತು.  ಅವರು ಬೆರಯಾರಿಲ್ಲದೆ ಸೌಂದರ್ಯಳ ತಂದೆಯಾಗಿದ್ದರು.  

ನಮ್ಮನ್ನೆಲ್ಲ living roomಗೆ ಕರೆದುಕೊಂಡು ಹೋಗಿ sofaದ ಮೇಲೆ ಕುಳಿತುಕೊಳ್ಳಲು ಹೇಳಿದರು.  ಅಲ್ಲಿದ್ದ ನೀರಿನ glass ಕೈಗೆತ್ತಿಕೊಂಡು ನೀರು ಕುಡಿಯುತ್ತಿರುವಾಗಲೇ ಸೌಂದರ್ಯಳ ತಂದೆಯವರು ನನ್ನ ತಂದೆಯವರಿಗೆ 'ನಿಮ್ಮ ಎರಡನೆಯ ಮಗನನ್ನು ನಿನ್ನೆಯೇ ಕಾಲೇಜಿನಲ್ಲಿ ಮಾತನಾಡಿಸಿದೆ, very good boy' ಎಂದು ಹೊಗಳಿಕೆಯ ಮಾತುಗಳನ್ನು ಆಡಿದರು.  ಸ್ವಲ್ಪ ಹೊತ್ತಿಗೆ ಸಜ್ಜಿಗೆ, ಉಪ್ಪಿಟ್ಟು ಬಂದಿತಾದರೂ ಏನೂ ತಿನ್ನಲು ಮನಸ್ಸಿಲ್ಲದೇ ತಲೆ ನೋವೆಂದು ಹೇಳಿ ಬಲವಂತದಿಂದ ಕಾಫಿ ಕುಡಿದೆ.  ಸೌಂದರ್ಯ ರೇಶಿಮೆ ಸೀರೆಯುಟ್ಟು ತಾಯಿಯ ಜೊತೆಗೆ ಒಳಗಿನಿಂದ ಬಂದು ತಲೆ ತಗ್ಗಿಸಿ ಕುಳಿತಾಗ ನಾನು ತಲೆಯೆತ್ತದೇ ಅಲ್ಲಿದ್ದ ವಾರ ಪತ್ರಿಕೆಯ ಮೇಲೆ ಸುಮ್ಮನೆ ಕಣ್ಣು ಹಾಯಿಸಿರುವಂತೆ ನಟಿಸುತ್ತಿದ್ದೆ.  

ಮನೆಯಿಂದ ಹೊರಗೆ ಮತ್ತೆ ಟ್ಯಾಕ್ಸಿಯಲ್ಲಿ ಕುಳಿತಾಗ ನನ್ನ ತಂದೆ ಮದುವೆ ಮಾಘ ಮಾಸದಲ್ಲಿ ಇಟ್ಟುಕೊಳ್ಳೋಣ ಎಂದಾಗ ನನ್ನ ತಾಯಿಯವರು ನಿಶ್ಚಿತಾರ್ಥ ಮಾತ್ರ ಕೂಡಲೇ ಮಾಡಿ ಮುಗಿಸೋಣ, ಏಕೆಂದರೆ ನಂತರ ಹುಡುಗ ಹುಡುಗಿ ಇಬ್ಬರೂ ಎಲ್ಲಿ ಬೇಕಾದರೂ ತಿರುಗಾಡಬಹುದು. ಯಾರು ಬೆರಳೆತ್ತಿ ತೋರಿಸುವುದಿಲ್ಲ, ನಿಂದನೆಗೂ ಅಸ್ಪದವಿರುವುದಿಲ್ಲ ಎಂದು ಸಮಝಾಯಿಸುತ್ತ, ಹೇಗೂ ಇವನು Americaಕ್ಕೆ ಹೋಗುತ್ತಿದ್ದಾನೆ.  ಸಧ್ಯ, ಇವನ ಬಗ್ಗೆ ನಾವೇನೂ ಚಿಂತಿಸಬೇಕಿಲ್ಲ.  ಮತ್ತೇ ಆ ಹುಡುಗಿಯೇಕೆ ಕಾಲೇಜಿಗೆ ಹೋಗಬೇಕು, ಹೀಗೆಂದು ಹೇಳುತ್ತಿರುವಾಗಲೇ ನಾನು ಕೇಳಲು ಮನಸ್ಸಿಲ್ಲದಿದ್ದರೂ ಕೇಳಿಸಿಕೊಳ್ಳಲೇಬೇಕಾಯ್ತು.  ನನ್ನ ಮನಸ್ಸಿನ ಭಾವನೆಗಳಿಗೆ ಸ್ಪಂದಿಸಲು ಮತ್ತು ನನ್ನನ್ನು ಸಂತೈಸಲು ಯಾರೂ ನನ್ನ ಜೊತೆಗಿರಲಿಲ್ಲ.  ಮನಸ್ಸಿನಲ್ಲಿದ್ದ ಸೌಂದರ್ಯ ವಿಮಾನದಲ್ಲಿ ಕುಳಿತು ನನ್ನನ್ನು ನೋಡಿ ವಿದಾಯ ಹೇಳುತ್ತಿದ್ದಳು.
end- ನಡೆದದ್ದು ಅಲ್ಲ imagination written sometime ಇನ್ 2002

.
back to  

end.

.

No comments:

Post a Comment