Monday 30 November 2020

ಮೂರ್ಖ ಗೂರ್ಖಾ moorkha gurkha


Imaginative write-up

(ಮಕ್ಕಳಿಗಾಗಿ) ಪ್ರಹಸನ    ಮೂರ್ಖ ಗೂರ್ಖಾ 

ಪಾತ್ರಗಳು 

1. ಗೂರ್ಖಾ 

2. ಕಳ್ಳ 


Scene 1


ಗೂರ್ಖಾ: ಏಯ್ ಯಾರೋ ನೀನು ಇಷ್ಟು ಹೊತ್ನಲ್ಲಿ ಮನೆಯೊಳಗಿನಿಂದ ಬರ್ತಾ ಇದೀಯ ?

ಕಳ್ಳ:ಅಯ್ಯೋ ಸಿಕ್ಕಿ ಬಿಟ್ಟೆನಲ್ಲಾ... ರೀ ಗೂರ್ಖಪ್ಪನೋರೆ, ದಯವಿಟ್ಟು ನನ್ನ ಬಿಟ್ಟು ಬಿಡ್ರೀ. ನಾನೊಬ್ಬ ಮಾಮೂಲಿ ಚಿಕ್ಕ ಕಳ್ಳಾ ರೀ 

ಗೂರ್ಖಾ:ಅಂತೂ ಸಿಕ್ಕಿದೆಯಲ್ಲ, ಸರಿಯಾಗಿ ಕೆಲ್ಸ ಮಾಡೋದಿಲ್ಲ ಅಂತಾ ನನ್ನ 4 ತಿಂಗಳುಗಳಲ್ಲಿ 5 ಕಡೆ ಕೆಲಸದಿಂದ ಕಿತ್ ಹಾಕಿಸಿಕೊಂಡು ಕಷ್ಟಪಟ್ಟು ಈ ಕೆಲ್ಸನ ಹೇಗೋ ಪಡೆದುಕೊಂಡಿದ್ದೇನೆ. ಇನ್ನೂ 1 ತಿಂಗಳೂ ಕೂಡ ಆಗಿಲ್ಲ. ಈಗ ನಿನ್ನನ್ನ ನಾನು ಬಿಟ್ಟು ಬಿಡ್ತೀನಾ ?

ಕಳ್ಳ:ಏನೂ 5 ಕಡೆ ನಿಮಗೆ ಕೆಲ್ಸ ಹೋಯ್ತಾ ? ಯಾಕೆ ಈ ಕೆಲ್ಸ ಮಾಡುತ್ತೀರ? ಆರಾಮವಾಗಿ ಹಣ ಗಳಿಸೋ ವಿಧಾನ ಒಂದಿದೆ

ಗೂರ್ಖಾ:ಆ! ಏನದು ಕೆಲ್ಸ ?

ಕಳ್ಳ:ಏನಿಲ್ಲ (ಯೋಚನೆ ಮಾಡುತ್ತಾನೆ)

ಗೂರ್ಖಾ:ಬೇಗ ಹೇಳು 

ಕಳ್ಳ:ಹಾ. ನಿಮ್ಮ ಕೆಲಸದಲ್ಲಿ ರಾತ್ರಿ ಡ್ಯೂಟಿ ಸಹ ಇದೆಯಾ ?

ಗೂರ್ಖಾ:ರಾತ್ರಿ ಡ್ಯೂಟಿ ಕೂಡ ಅಲ್ಲಾ . ಬರೀ ರಾತ್ರಿ ಡ್ಯೂಟಿ ನೇ ಇದೆ ಗೊತ್ತಾ 

ಕಳ್ಳ:ಹಾಗಾದ್ರೆ ರಾತ್ರಿ ಎದ್ದಿರೋದು ನಿಮಗೆ ಸುಲಭ ಅಂದ್ ಹಂಗೆ?

ಗೂರ್ಖಾ:ಹೌದು ಹೌದು 

ಕಳ್ಳ: ಹಾಗಾದ್ರೆ ತುಂಬಾ ಸುಲಭದ ಕೆಲ್ಸ ಒಂದಿದೆ

ಗೂರ್ಖಾ:ಸುಲಭ.... ಅಯ್ಯೋ ಬೇಗ ಹೇಳಯ್ಯ ಯಾವ ಕೆಲ್ಸ ಅಂತ 

ಕಳ್ಳ: ಏನಿಲ್ಲ ನನ್  ಜೊತೆ ಸೇರಿಬಿಡಿ ಇಬ್ರೂ ಸೇರಿ ಒಳ್ಳೇ  ಹಣ ಕಮಾಯ್ಸ್ ಬಹುದು

ಗೂರ್ಖಾ:ಏನೂ ಕಳ್ಳತನ ಮಾಡು ಅಂತೀಯ. ಏನೋ ಒಳ್ಳೇ  ಕೆಲ್ಸ ಅಂತ ಹೇಳ್ತಿದ್ದೀ 

ಕಳ್ಳ:ಕಳ್ಳತನ ಕೂಡ ಒಂದು ಕೆಲ್ಸ ಸ್ವಾಮಿ. ಮತ್ತೇ ರಾತ್ರಿ ಮಾತ್ರ ಡ್ಯೂಟಿ 

ಗೂರ್ಖಾ:ಏಯ್ ಚುಪ್. ಏನೋ ಕೆಲ್ಸ ಅಂತಾ ಬಹಳ ಖುಷಿಯಾಗಿದ್ದೆ. ಸಧ್ಯ ನನ್ನ ಈಗಿನ ಕೆಲ್ಸ ಹೋಗದೇ ಇದ್ದರೆ ಸಾಕು. ಹೇಗೂ ನೀನು ಸಿಕ್ಕಿದ್ದೀಯಲ್ಲ ಇನ್ನು ಒಂದು ವರ್ಷ ಆದ್ರೂ ಇದೇ ಕೆಲಸದಲ್ಲಿ ಇರಬಹುದು. ಹಾ ಹಾ ಹಾ 

ಕಳ್ಳ:ರೀ ಸ್ವಾಮಿ ಗೂರ್ಖಪ್ಪ ನೊರೇ ನನ್  ಬಿಟ್ಟು ಬಿಡ್ರೀ ದಯೆವಿಟ್ಟು 

ಗೂರ್ಖಾ:ಬಿಡೋದಾ, ಅದ್ ಮಾತ್ರ ಸಾಧ್ಯವಿಲ್ಲ 

ಕಳ್ಳ: (ಯೋಚನೆ ಮಾಡಿ) ಹಾಗಾದ್ರೆ ಒಂದ್ ಸಣ್ಣ ವಿಷಯ ಮರೆತು ಹೋಗಿದೆಯಲ್ಲ 

ಗೂರ್ಖಾ:ಏನದೂ ?

ಕಳ್ಳ:ಇಲ್ಲಿ ನೋಡಿ. ತುಂಬಾ ಕಲ್ಲುಗಳಿವೆ. ನೀವೋ ಬೂಟ್ಸ್ ಹಾಕಿದ್ದೀರ. ನನ್ನ ಕಾಲು ನೋಡಿ, ಚಪ್ಪಲಿನೇ ಇಲ್ಲ

ಗೂರ್ಖಾ:ಏಕೆ ?

ಕಳ್ಳ:ಮನೆಯೊಳಗೆ ಮರೆತು ಬಿಟ್ಟಿದ್ದೀನಿ ಅದಕ್ಕೆ 

ಗೂರ್ಖಾ:ಅದಕ್ಕೆ ನಾನೇನು ಮಾಡ್ಲಿ ?

ಕಳ್ಳ:ನೀವು ಏನೂ ಮಾಡಬೇಡಿ, permission ಕೊಟ್ರೆ ಒಳಗೆ ಹೋಗಿ ಚಪ್ಪಲಿ ಹಾಕೊಂಡ್ ಬಂದ್ ಬಿಡ್ತೀನಿ 

ಗೂರ್ಖಾ:ನೀನು ಹಾಗೇ ಓಡಿ ಹೋದರೆ ?

ಕಳ್ಳ:ನಾನೇಕೆ ಓಡಿ ಹೋಗ್ಲಿ. ಇಲ್ಲಿ ತಂದಿದ್ದೀನಲ್ಲ ಕಳ್ಳ ಸಾಮಾನು, ಇದನ್ನು ಇಲ್ಲೇ ನಿಮ್ಮ ಹತ್ತಿರ ಇಡ್ತೀನಿ. ನಾನು ಹೀಗೆ ಹೋಗಿ ಹಾಗೇ ಬಂದ್ ಬಿಡ್ತೀನಿ

ಗೂರ್ಖಾ:ಅದು ಸರೀನೆ, ಸಾಮಾನು ಇಲ್ಲೇ ಇದ್ರೆ ನಿನ್ನ ನಾನು ಕಳಿಸಬಹುದಲ್ವಾ 

ಕಳ್ಳ:ಅದೇ ಸ್ವಾಮಿ ನಾನು ಹೇಳೋದು 

ಗೂರ್ಖಾ:ತಕ್ಷಣ ಬರಬೇಕು ?

ಕಳ್ಳ:ಹೀಗೋಗಿ ಹಾಗೆ ಬಂದ್ ಬಿಡ್ತೀನಿ 

(ಸ್ವತಃ ) ಸಧ್ಯ ಬದುಕಿದೆಯಾ ಬಡ ಜೀವವೇ..  

(ಓಡಿ ಹೋಗುವನು)

ಗೂರ್ಖಾ:ಎಷ್ಟೋ ಹೊತ್ತಾಯ್ತು ಇನ್ನೂ ಬರಲಿಲ್ಲವಲ್ಲ. ಸಧ್ಯ ಯಾರೂ ನೋಡಲಿಲ್ಲ. ನೋಡಿದ್ರೆ ಕಳ್ಳನನ್ನು ಹಿಡಿದಿಲ್ಲಾ ಅಂತ ನನ್ನ ಕೆಲಸಕ್ಕೆ ಕೊಕ್ ಕೊಡುತ್ತಿದ್ದರಲ್ಲ.


Scene 2

ಗೂರ್ಖಾ:ಏಯ್ ಯಾರೋ ನೀನು.... ಹಾಂ ನಿನ್ನೆಯ ಕಳ್ಳಾನೇ. ಏನಯ್ಯ ಚಪ್ಪಲಿ ತರ್ತೀನೀ ಅಂತ ಹೊಗೆ ಕೈ ಕೊಟ್ಟಿದ್ಯಲ್ಲ 

ಕಳ್ಳ:ಅಯ್ಯಾ ತಪ್ಪಾಯ್ತು ಸ್ವಾಮಿ. ಇನ್ಮೇಲೆ ಹಾಗೆ ಮಾಡೋಲ್ಲ. ಇದೊಂಸಾರಿ ನನ್ನ ಬಿಟ್ಟು ಬಿಡಿ ದ್ಯಾವರೇ 

ಗೂರ್ಖಾ:ಏನೂ ? ನಿನ್ನ ಬಿಡೋದಾ. ಸಾಧ್ಯವೇ ಇಲ್ಲ. ನಡೀಯಯ್ಯಾ ನನ್ನ ಜೊತೆಗೆ ಪೊಲೀಸ್ ಸ್ಟೇಷನ್ ಗೆ 

ಕಳ್ಳ:(ಯೋಚನೆ ಮಾಡುತ್ತಾ ಗೂರ್ಖಾನ ಕಾಲುಗಳನ್ನು ನೋಡಿ)  ರೀ ಗೂರ್ಖಾ ಸಾಹೇಬರೇ, ನಿಮ್ಮ ಕಾಲು ನೋಡ್ಕೊಳ್ಳಿ 

ಗೂರ್ಖಾ:ಯಾಕೆ ?  ಅರೇ ಬೂಟ್ಸ್ ಏ  ಹಾಕಿಲ್ಲವಲ್ಲ 

ಕಳ್ಳ:ಅದೇ ಸ್ವಾಮಿ ನಾನು ಹೇಳ್ತಿರೋದು. ನೋಡಿ ಎಷ್ಟೊಂದು ಕಲ್ಲುಗಳಿವೆ. ಇಂತಹ ಜಾಗದಲ್ಲಿ ನೀವು ಹೇಗೆ ಬರೀ ಕಾಲಿನಲ್ಲಿ ನಡೆದು ಬರ್ತೀರಾ. ಮತ್ತೇ ..ಪೊಲೀಸ್ ಸ್ಟೇಶನ್ ನಲ್ಲಿ ನೀವು ಗೂರ್ಖಾ ಎಂದು ಹೇಗೆ ತಾನೇ ವೊಪ್ಕೋತಾರೆ ಪೊಲೀಸ್ನವರು ? ಬೂಟ್ಸ್ ಇರಲೇಬೇಕಲ್ಲವಾ ?

ಗೂರ್ಖಾ:ಹೌದು. ನೀನು ಹೇಳೋದೂ ಸರಿ. ಆದ್ರೆ ಬೂಟ್ಸ್ ಅಲ್ಲಿ ಮನೆ ಹಿಂದುಗಡೆ ಇರುವ ನನ್ನ ರೂಮಿನಲ್ಲಿ ಇದೆಯಲ್ಲಾ. ಅಲ್ಲಿ ಬಿಟ್ಟಿದ್ದೀನಿ 

ಕಳ್ಳ:ನಾನು ಹೋಗಿ ತಂದು ಕೊಡಲಾ ?

ಗೂರ್ಖಾ:ನಾನೇನು ಮೂರ್ಖ ಅಂದ್ಕೊಂಡಿದ್ಯಾ ಅಲ್ಲಿಗೆ ನಿನ್ನ ಕಳಿಸೋಕೆ ? ಮತ್ತೆ ನಿನ್ನೆಯ ತರಹ ನೀನು ಓಡಿ  ಹೋಗ್ತೀಯಾ ಅಂತ ನಂಗೆ ಗೊತ್ತಯ್ಯ 

ಕಳ್ಳ:ಅಯ್ಯಾ ಅದಲ್ಲ ನಾನು ಹೇಳುತ್ತಾ ಇರುವುದು. ನೀವು... ನೀವು.... ಹೀಗೆ ಮಾಡಬಹುದಲ್ವಾ ?

ಗೂರ್ಖಾ:ಹೇಗೆ ?

ಕಳ್ಳ:ನನ್ನ ಕಳಿಸೋಕೆ ನಿಮಗೆ ಸಂಶಯ. ಆದ್ರಿಂದ ನಾನು ಇಲ್ಲೇ ಇರ್ತೀನಿ. ಎಲ್ಲೂ ಹೋಗಲ್ಲ. ನೀವೇ ಹೋಗಿ ಬೂಟ್ಸ್ ತಂದುಬಿಡಿ 

ಗೂರ್ಖಾ:ಹಾಂ . ಇದು ಸರಿ. ನನಗೆ ಹೊಳದೇ ಇಲ್ಲ. ನೀನು ಇಲ್ಲೇ ಇರು. ನಾನು ಈಗಲೇ ಹೋಗಿ ಬೂಟ್ಸ್ ನ ಹಾಕೊಂಡ್ ಬಂದ್ ಬಿಡ್ತೀನಿ. 

(ಹೋಗುವನು)

ಕಳ್ಳ: ಅಬ್ಬಾ. ಜೀವ ಬದುಕಿತು, ಈ ಸಾರಿ ನಾನು ಕದ್ದಿದ್ದ ಸಮಾನೂ ಕೂಡ ನನಗೇ ಸಿಕ್ಕಿತಲ್ಲ.  ಹಾ ಹಾ ಹಾ 

(ಓಡಿ ಹೋಗುವನು) (ಮಕ್ಕಳಿಗಾಗಿ ಬರೆದಿರುವುದು)

end- ನಡೆದದ್ದು ಅಲ್ಲ imagination written someಟೈಮ್ in 2002

.
back to  

end.

.

No comments:

Post a Comment