Imaginative story - Time 1970s
ನಾನು ಪ್ರಿಯೂನಿವರ್ಸಿಟಿ ಸೇರುವವರೆಗೂ ಯಾವುದೇ ಪತ್ರವನ್ನು ಬರೆಯುವ ಗೋಜಿಗೆ ಹೋಗಲಿಲ್ಲ. ಮನೆಯ ಹತ್ತಿರವೇ ಶಾಲೆ ಇತ್ತು. ನಮ್ಮ ಮನೆಯವರೆಲ್ಲ ಅಂದರೆ ಅಕ್ಕ, ಅಣ್ಣ ಅತ್ತಿಗೆ ಸಹಿತ ಒಟ್ಟಿಗೆಯೇ ಒಂದೇ ಮನೆಯಲ್ಲಿ ವಾಸವಾಗಿದ್ದೆವು. ನನ್ನ ರಜೆ ಅರ್ಜಿಗಳ ಒಳಗೊಂಡು ಯಾವುದಾದರೂ ಪತ್ರಗಳನ್ನು ಬರೆಯುವ ಕಾರ್ಯ ನನ್ನ ತಂದೆ ಅಥವಾ ದೊಡ್ಡ ಅಣ್ಣ ಮಾಡುತ್ತಿದ್ದರು.
ವಿಜ್ಞಾನದ ವಿಭಾಗ ಆರಿಸಿ ಪಿ.ಯು.ಸಿ (ಪ್ರಿ-ಯೂನಿವರ್ಸಿಟಿ) ಸೇರಿದಾಗ ಇಂಗ್ಲಿಷ್ ಉಪನ್ಯಾಸಕ್ಕೆ ಕಲೆ ಮತ್ತು ವಾಣಿಜ್ಯ ವಿಭಾಗದ ಹುಡುಗ ಹುಡುಗಿಯರೂ ಬಂದು ಸೇರುತ್ತಿದ್ದರು. ಆಗಾಗ ಚಿಕ್ಕ ಪುಟ್ಟ ಕವಿತೆಗಳನ್ನು ಬರೆಯುತ್ತಿದ್ದ ನನಗೆ ನನ್ನ ಕವನಗಳಲ್ಲಿ ಸೃಷ್ಟಿಸಿದ 'ಸೌಂದರ್ಯ' ನಿಜರೂಪದಲ್ಲಿ Arts ವಿಭಾಗದ ಒಬ್ಬ ಹುಡುಗಿಯಲ್ಲಿ ಕಂಡಾಗ, ಅವಳ ಸೌಂದರ್ಯಕ್ಕೆ ನಿಜವಾಗಿಯೂ ನಾ ಮನಸೋತೆನು. ನನ್ನ-ಅವಳ ಗೆಳೆತನ ಗಿಟ್ಟಿಸಲು ಏನೆಲ್ಲಾ ಉಪಾಯಗಳನ್ನು ಮಾಡಬಹುದೆಂಬುದನ್ನು ಸ್ನೇಹಿತರ ಜೊತೆಯಲ್ಲಿ ಚರ್ಚಿಸಿದೆ. ಸ್ನೇಹಿತರ ಬಲವಂತಕ್ಕೆ ಒಂದು ಪತ್ರವನ್ನು ಅವಳಿಗಾಗಿ ಬರೆದು ಹೇಗಾದರೂ ಮಾಡಿ ನನ್ನಲ್ಲಿರುವ ಕವನ ಬರೆಯುವ ಸಾಮರ್ಥ್ಯವನ್ನು ಅವಳಿಗೆ ತಿಳಿಸಿ, ಪತ್ರದ ಮುಖಾಂತರ ಅವಳ ಗೆಳತನಕ್ಕೆ ಹಂಬಲಿಸಿದೆ. ಹಾಗಾಗಿ ನನ್ನ ಪ್ರಪ್ರಥಮ ಪತ್ರ ಒಂದು ಪ್ರೇಮಪತ್ರದ ರೂಪು ತಾಳಿತ್ತು.

ಆದರೆ ಈ ಪತ್ರವನ್ನು ಅವಳಿಗೆ ಹೇಗೆ ತಲುಪಿಸಬೇಕೆಂದು ರಾತ್ರಿಯೆಲ್ಲ ಯೋಚಿಸಿದೆ. ಮೊದಲು ಪತ್ರವನ್ನು ಅಂಚೆಯಲ್ಲಿ ಅವಳ ಮನೆಯ ವಿಳಾಸಕ್ಕೆ ಕಳಿಸಿದರೆ ಹೇಗೆ ?
ಅಕಸ್ಮಾತ್, ನನ್ನ ಕಾಗದ ಸೌಂದರ್ಯಳ ತಂದೆಗೇನಾದರೂ ಸಿಕ್ಕಿದ್ದರೆ ಕೂಡಲೇ ಅವರು ಕಾಲೇಜಿಗೆ ಬಂದು ನನ್ನನ್ನು ಕಾಲೇಜಿನಿಂದ ಹೊರಗಟ್ಟುವವರೆಗೂ ಬಿಡುತ್ತಿರಲಿಲ್ಲವೇನೋ. ಒಂದು ವೇಳೆ ನನ್ನ ಕಾಗದ ಅವಳ ತಾಯಿಗೇನಾದರೂ ಸಿಕ್ಕಿದ್ದರೆ ಮೊದಲನೆಯ ದಿನ ಮಗಳನ್ನು ಬೈದರೂ ಮಾರನೆಯ ದಿನ ನನ್ನ ಜಾತಿಯ ಬಗ್ಗೆ, ಮನೆತನದ ಬಗ್ಗೆ, ಬುದ್ಧಿವಂತಿಕೆಯ ಬಗೆಗೆಲ್ಲ ವಿವರವಾಗಿ ಕೇಳಿ, ರಿಶ್ತಾ ಆಗಲೇ ಪಕ್ಕಾ ಮಾಡಲು ಯೋಚಿಸುತ್ತಿದ್ದರೇನೋ. ಮತ್ತೇ, ಆಕಸ್ಮಿಕವಾಗಿ ಅವಳ ಅಣ್ಣನಿಗೇನಾದರೋ ಆ ಪತ್ರ ಸಿಕ್ಕಿದ್ದರೆ ಕೂಡಲೇ ಅವನ gang ಮುಖಾಂತರ ನನ್ನ bang ಮಾಡಿ ನಾನು bandage ಕಟ್ಟಿಸಿಕೊಳ್ಳುವುದನ್ನು ನೋಡದ ಹೊರತು ತನ್ನ ಮನೆಗೆ ವಾಪಸ್ಸಾಗುತ್ತಿರಲಿಲ್ಲವೇನೋ.
ಏನು, ಒಂದು ಪ್ರೇಮ ಪತ್ರ ಬರೆದಾಗ ಏನೆಲ್ಲ ಮುಂದಾಲೋಚನೆಗಳನ್ನು ಮಾಡಬೇಕೆಂದು ನೀವಾಗಲೇ ಯೋಚಿಸತ್ತಿರಬಹುದು. ನಾನು ಊಹಿಸಿರುವುದರಲ್ಲಿ ನಿಜಾಂಶಗಳು ಇವೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲವೆಂದು ನನಗೆ ಅನ್ನಿಸುತ್ತದೆ.
ಪತ್ರವಂತೂ ಬರೆದಿದ್ದಾಗಿದೆ. ಹೇಗೆ ಈ ಪ್ರೇಮಪತ್ರವನ್ನು ನನ್ನ ಸೌಂದರ್ಯಳಿಗೆ ತಲುಪಿಸಬಹುದು ಎಂದು ಸುದೀರ್ಘವಾಗಿ ಆಲೋಚಿಸತೊಡಗಿದೆ. ಸ್ನೇಹಿತರ ಮುಖಾಂತರ, ಕಾಲೇಜಿನ ಜವಾನನ ಮುಖಾಂತರ, ಅವಳು ಬಳೆ ಕೊಳ್ಳುವ ಅಂಗಡಿಯವನ ಮುಖಾಂತರ, ಅವಳ ಚಿಕ್ಕ ತಮ್ಮನ ಮುಖಾಂತರ, ಪಾರಿವಾಳದ ಮುಖಾಂತರ- ಏನೆಲ್ಲಾ ಮನದಲ್ಲಿ ಹಾದುಹೋದರೂ ಯಾವುದೇ ಸಂಚಾರ (channel) ದಲ್ಲೂ ಸರಿಯಾದ ಪರಿಹಾರ ಕಾಣಿಸಲಿಲ್ಲ.

ಕೊನೆಗೂ ಆ ಪತ್ರವನ್ನು ನಾನೇ ಖುದ್ದಾಗಿ ಕಾಲೇಜಿನಲ್ಲೇ ತಲುಪಿಸಲು ನಿರ್ಧರಿಸಿ, ಆ ದಿನ ಕೊನೆಯ ಉಪನ್ಯಾಸಕ್ಕೆ ಚಕ್ಕರ್ ಹಾಕಿ, ನನ್ನ ಸೌಂದರ್ಯ ಅವಳ ಕ್ಲಾಸ್ ನಿಂದ ಹೊರಗೆ ಬರುವುದನ್ನೇ ಕಾಯ್ದು, ಅವಳ ಹತ್ತಿರ ಹೋಗಿ, ಧೈರ್ಯಮಾಡಿ, ನನ್ನನು ಮೊದಲು ಪರಿಚಯಿಸಿಕೊಂಡು, 'ನಾನೊಂದು ಕನ್ನಡದಲ್ಲಿ ಕವನವನ್ನು ಬರೆದಿದ್ದೇನೆ - ದಯವಿಟ್ಟು ಇದನ್ನು ಓದಿ ನಿಮ್ಮ ವಿಮರ್ಶೆ ತಿಳಿಸಿರಿ' ಎಂದು ಕಾಗದವನ್ನು ಕೊಡಲು ಮುಂದಾದೆ. ಅದಕ್ಕವಳು Englishನಲ್ಲಿ 'Sorry I can't read Kannada' ಎಂದಾಗ ನನ್ನ ಮೊರೆ ಪೆಚ್ಚಾಯಿತು. ಆ ಕ್ಷಣ ನನ್ನ ಮನದಲ್ಲಿ ಮೂಡಿದ್ದು ಹೀಗೆ -
ಇದನ್ನು ನಾನು ಮೊದಲೇ ಯಾಕೆ ಗ್ರಹಿಸಲಿಲ್ಲ. ನೋಡಲಿಕ್ಕೇನೋ ಕನ್ನಡದವಳ ತರಹವೇ ಇದ್ದಾಳೆ. ಒಳ್ಳೆಯ ಮನೆತನದ ಹುಡುಗಿಯ ಹಾಗೆ ಕಾಣುತ್ತಾಳೆ. ಅವಳು ಕನ್ನಡದಲ್ಲಿಯೂ ಮಾತನಾಡಿರುವುದನ್ನು ನಾನು ಕಿವಿಯಾರೆ ಕೇಳಿದ್ದೇನೆ. ಅವಳೇಕೆ ಹೀಗೆ ಹೇಳಿದಳು? ಬಹುಶಃ ನಿಜವಾಗಿಯೂ ಅವಳು convent ಶಾಲೆಯಲ್ಲಿ ಕಲಿತು ಎರಡನೆಯ ಕಲಿಕಾ ಭಾಷೆ ಕನ್ನಡದ ಬದಲಾಗಿ ಸಂಸ್ಕೃತ ವಿಷಯ ತೆಗೆದುಕೊಂಡಿರಬಹುದು. ಆಗ ಮೂರನೆಯ ಕಲಿಕಾ ಭಾಷೆಯಾಗಿ 50 ಅಂಕಗಳಿಗೆ ಕನ್ನಡದ ಬದಲು ಹಿಂದಿ ವಿಷಯವನ್ನು ತೆಗೆದುಕೊಂಡಿದ್ದಾಳೋ ಏನೋ. ಆಗಷ್ಟೇ ಕನ್ನಡ ಓದಲು ಬರದೇ ಇರುವಂತಹದು. ಅಯ್ಯೋ, ನಾವು ಎರಡನೆಯ ಕಲಿಕಾ ಭಾಷೆಯಾಗಿ ಕನ್ನಡ, ಮೂರನೆಯ ಕಲಿಕಾ ಭಾಷೆಯಾಗಿ ಹಿಂದಿಯನ್ನು 50 ಅಂಕಗಳಿಗೆ ಓದಿದ ಹಾಗೆ ಅವಳೇಕೆ ಮಾಡಲಿಲ್ಲ. ಅಥವಾ ಒಂದು ವೇಳೆ ಕನ್ನಡ ಓದಿದ್ದರೂ, ನಾನು ಕವನ ಎಂದಾಕ್ಷಣ ವಿಮರ್ಶೆಗೆ ಕಷ್ಟವಾಗಬಹುದೆಂದು ಓದಲು ಹಿಂದೇಟು ಹಾಕಿರಬಹುದೇ ಅಥವಾ ಬೇರೆ ಇನ್ನೇನು ಕಾರಣವಿರಬಹುದು? ಹೇ ರಾಮ ರಾಮ, ಎಂಥಹ ಕೆಲಸ ಮಾಡಿಬಿಟ್ಟೆ! ನನ್ನ ಕನ್ನಡದ ಪ್ರೇಮ ಪತ್ರವನ್ನು ಏಕೆ ಮೊದಲೇ ಇಂಗ್ಲಿಷಿನಲ್ಲಿ ಭಾಷಾಂತರಿಸಿ ಒಂದು ಪ್ರತಿಯನ್ನು ಇಟ್ಟುಕೊಳ್ಳಲಿಲ್ಲ, ಹೀಗೆ ನನ್ನನ್ನು ನಾನೇ ಶಪಿಸಿಕೊಂಡೆನು.
'It's Okay, no problem' ಅಂತ ಸೌಂದರ್ಯಳಿಗೆ ಹೇಳಿ, ಕವನವನ್ನು ವಾಪಸ್ಸು ನನ್ನ ಜೇಬಿಗೆ ಸೇರಿಸಿದೆ. ಕೆಲವು ದಿನಗಳ ನಂತರ ಸೌಂದರ್ಯ ಅಪ್ಪಟ ಕನ್ನಡದವಳು, ಸಂಪ್ರದಾಯಸ್ತ ಮನೆಯವಳು ಮತ್ತು ಚೂಟಿ ಹುಡಿಗಿಯೆಂದು ಗೊತ್ತಾಯಿತು. ನನ್ನ ಕವನದಲ್ಲಿ ಏನಿರಬಹುದು ಎಂದು ಮೊದಲೇ ಊಹಿಸಿ ನನಗೆ ಕೈ ಕೊಟ್ಟಿದ್ದಳು.
ಈಗ ಆ ನನ್ನ ಪ್ರಪ್ರಥಮ ಪ್ರೇಮಪತ್ರವನ್ನು ಯಾರಿಗೆ ಕೊಡಬಹುದೆಂದು ಯೋಚಿಸಿದೆ. ಒಬ್ಬರಿಗೆ ಬರೆದ ಪತ್ರ ಇನ್ನೊಬ್ಬರಿಗೆ ಹೇಗೆ ತಾನೇ ಕೊಡಲು ಸಾಧ್ಯ! ಸೌಂದರ್ಯಳ ವೇಷ-ಭೂಷಣ, ಹಾವ-ಭಾವ, ಕಣ್ಣು, ಮೂಗು, ತುಟಿ, ಗಲ್ಲ, ಎಲ್ಲವನ್ನೂ ಎಳೆ-ಎಳೆಯಾಗಿ ನನ್ನ ಪತ್ರದಲ್ಲಿ ವಿವರಿಸಿದ್ದೆ. ಬೇರೆ ಹುಡುಗಿಗೆ ಏನಾದರೂ ಕೊಡಲು ಹೊರಟರೆ ಇವಳಂತೆಯೇ ಅವಳು ಇರಬೇಕಲ್ಲ. ಅಂಥವರಾರೂ ನನಗೆ ಸಿಕ್ಕಲೇ ಇಲ್ಲ. ಹಾಗಾಗಿ ನನ್ನ ಮೊದಲನೆಯ ಪತ್ರ ಅರ್ಥಾತ್ ಮೊದಲನೆಯ ಪ್ರೇಮಪತ್ರ ನನ್ನಲ್ಲೇ ಉಳಿಯಿತು.
ನನ್ನ ಮದುವೆಯ ನಿಶ್ಚಿತಾರ್ಥದ ದಿನದವರೆಗೂ ಆ ಪತ್ರ ಭದ್ರವಾಗಿ ನನ್ನ ಹತ್ತಿರವೇ ಇದ್ದಿತಾದರೂ, ನಂತರದ ಜೀವನದಲ್ಲಿ ಯಾವುದೇ ಅವಾಂತರಕ್ಕೆ ಎಡೆ ಮಾಡಿ ಕೊಡಲು ಇಚ್ಚಿಸದೆ ಆ ಪತ್ರವನ್ನು ಹರಿಯಲೂ ಮನಸ್ಸಾಗದೆ, ಪತ್ರವನ್ನು ನನ್ನ ಭಾವೀ ಪತ್ನಿಯ ಹೆಸರಿಗೆ ಪೋಸ್ಟ್ ಮಾಡಿದೆ. ಕಾಲೇಜಿನಲ್ಲಿ ಬೇರೆ ಯಾವ ಹುಡುಗಿಗಾದರೂ ಕೊಟ್ಟಿದ್ದರೆ ಕವನದಲ್ಲಿ ನಾನು ಕೊಟ್ಟ ಉಪಮೆಗಳು ಸ್ವಲ್ಪವಾದರೂ ಸರಿ ಹೊಂದುತ್ತಿದ್ದವೋ ಏನೋ ಎಂದೆನಿಸಿದರೂ ಬೇರೆ ದಾರಿ ಕಾಣದೆ ಈ ಜಾಣ ನಿರ್ಣಯವನ್ನು ತೆಗೆದುಕೊಂಡೆನು.
end- elloo ನಡೆದದ್ದು ಅಲ್ಲ imagination written sometime ಇನ್ 2002
No comments:
Post a Comment