Monday, 30 November 2020

ಹೃದಯ ಬಡಿತ hrudaya badita


Imaginative write-up

ಕಥೆ या ಹರಟೆ - ಹೃದಯ ಬಡಿತ hrudaya badita

ಇದು ವಿಜ್ಞಾನದ ವಿಷಯ ಎಂದು ತಿಳಿದು ಮುಂದಿನ ಲೇಖನಕ್ಕೆ ಪುಟ ತಿರುವಿ ಹಾಕಬೇಡಿ ಮತ್ತೇ. ನಾನು ಹೇಳುತ್ತಿರುವುದು ಪ್ರೀತಿ, ಪ್ರೇಮ, ಹೃದಯದ ಬಗ್ಗೆ.
ಏನಿದು ಹೃದಯ ಬಡಿತ ? ಹರೆಯದ ವಯಸ್ಸಿನಲ್ಲಿ ಈ ಹೃದಯ ಬಡಿತದ ಖಾಯಿಲೆ ಸಾಮಾನ್ಯವಾಗಿ ಎಲ್ಲರಿಗೂ ಯಾವ ಭೇಧವಿಲ್ಲದೆಯೇ ಬರುವಂತಹದು. ಎಲ್ಲ ಹುಡುಗರ ಹಾಗೆ ನಮ್ಮ ಹುಡುಗ ಅಥವಾ ಹೀರೊ "ಗುಂಡ" ಕೂಡ ಯಾವುದಾದರೂ ಹುಡುಗಿಗೆ ತನ್ನ ಹೃದಯವನ್ನು ಅರ್ಪಿಸಲು ಕಾತರಿಸುತ್ತಿದ್ದನು.
ದಿನವೂ ಸಂಜೆ ಒಳ್ಳೆಯ ಪ್ಯಾಂಟ್ ಶರ್ಟ್ ಹಾಕಿ ನೀಟಾಗಿ ಕೂದಲನ್ನು ಬಾಚಿ ಶೂಗೆ cherry blossom ಪಾಲೀಶ್ ಹಚ್ಚಿ ಮಾರುಕಟ್ಟೆಯಲ್ಲಿರುವ ಒಂದು ಮೂಲೆಯಲ್ಲಿ ನಿಲ್ಲಲು ನಿರ್ಧರಿಸಿದ. ಹಾಗೇನೇ ಪ್ರತಿದಿನ ಕಾಲೇಜಿಗೆ ಎಲ್ಲರಿಗೂ ಗೊತ್ತಾಗುವ ಹಾಗೆ dark ಬಣ್ಣದ ಬಟ್ಟೆ ಹಾಕಿಕೊಂಡು ಹೋಗಲು ಪ್ರಾರಂಭಿಸಿದ. ತನ್ನ ಕ್ಲಾಸ್ ನಲ್ಲಿರುವ ಹುಡುಗಿಯರ ಹತ್ತಿರ ಹೋಗಿ ಬೇಕೆಂತಲೇ ನೋಟ್ಸ್ ಗಳನ್ನು ಕೇಳಲು ಆರಂಭಿಸಿದ. 
ಎನ್ ಮಾಡಿದ್ರೂ ಅವನಿಗೆ ಯಾವ ಹುಡುಗಿ ಕೂಡ ತಿರುಗಿ ನೋಡಲೇ ಇಲ್ಲ. ಸ್ನೇಹಿತನ ಮಾತಿನಂತೆ ತನ್ನ ಕೊನೆಯ ಪ್ರಯತ್ನವೆಂದು Mills and Boonsನ ಪುಸ್ತಕಗಳನ್ನು ಕಾಣುವ ಹಾಗೆ ಕೈಯಲ್ಲಿ ಹಿಡಿದು ಓಡಾಡಿದ. ಅಂತೂ ತನ್ನ ಕೊನೆ ಪ್ರಯತ್ನ ಫಲಕಾರಿಯಾಯಿತು. ಒಬ್ಬಳು ಹುಡುಗಿ ಇವನ  Mills and Boonsನ ಪುಸ್ತಕಕ್ಕೆ ಮಾರು ಹೋದಳು. 
"ಅವಳು ಇವನನ್ನು ನೋಡಿದಳು 
 ಇವನು ಅವಳನ್ನು
ಕಣ್ಣಲ್ಲಿ ನೋಟ ಒಂದಾಯಿತು 
ಇಬ್ಬರ ಪರಿಚಯವಾಯಿತು 
ಪರಿಚಯ ಸ್ನೇಹಕ್ಕೆ ತಿರುಗಿತು 
ಸ್ನೇಹದಿಂದ ಪ್ರೀತಿ ಪ್ರೇಮ
ಇಬ್ಬರ ಹೃದಯ ಬಡಿತ ಜೋರಾಯಿತು"
 
ತನ್ನ ಪ್ರಯತ್ನ ಫಲಿಸಿದ್ದಕ್ಕೆ ಹಾಗೂ ಹರಕೆಯನ್ನು ತೀರಿಸಲು Mills and Boonsನ 100 ಪುಸ್ತಕಗಳನ್ನು ಕೊಂಡು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಗುಂಡ ಹೋದನು. 
ಅಷ್ಟೋತ್ತರ ಮುಗಿಸಿ ಗರ್ಭಗುಡಿಯಿಂದ ಹೊರಗೆ ಬಂದ ಅರ್ಚಕರಿಗೆ ಇಂಗ್ಲಿಷಿನ ಪುಸ್ತಕಗಳ ದೊಡ್ಡ ಕಟ್ಟನ್ನು ನೋಡಿ ಗಾಭರಿಯಾಯಿತು. ದಕ್ಷಿಣೆ ಮಾತ್ರ ಕೈಯಲ್ಲಿ ಪಡೆದು ಪುಸ್ತಕಗಳ ಕಟ್ಟನ್ನು ಹುಂಡಿಯ ಪಕ್ಕದಲ್ಲಿಡಲು ಗುಂಡನಿಗೆ ಹೇಳಿದರು. ಹುಂಡಿಯಲ್ಲಿ ಹಾಕಲು ಹುಂಡಿಯ ಬಾಯಿ ಚಿಕ್ಕದಿತ್ತು. ಹಾಗಾಗಿ ಹುಂಡಿಯ ಮುಚ್ಚಳ ತೆಗೆಯಬೇಕಿತ್ತು ಮತ್ತು ಮುಚ್ಚಳ ತೆಗೆಯಲು ಹುಂಡಿಯ ಬೀಗದಕೈ trusteeಯವರ ಕೈಯಲ್ಲಿತ್ತು. 
ಅಂದು ಭಾನುವಾರ. ಗುಂಡ ಮತ್ತು ಅವನ ಪ್ರೇಯಸಿ ಇಬ್ಬರೂ ಸಿನೆಮಾ ನೋಡಲು ಹೋದರು. ಆಹಾ! ಎಂಥಾ ಒಳ್ಳೆಯ ಚಿತ್ರ. ಒಳ್ಳೆಯ ಹಾಡುಗಳು, ಆಗಾಗ ಕವನಗಳ ಸುರಿಮಳೆ. ಇಂಟರ್ವಲ್ ನಲ್ಲಿ ಗುಂಡನೂ ಹುಮ್ಮಸ್ಸಿನಿಂದ ಹುಡುಗಿಗೆ ಕವಿತೆ ಹೇಳಲು ಪ್ರಾರಂಭಿಸಿದ.
"ನೀನೇ ನನ್ನ ಅರ್ಚನಾ 
ನೀನೇ ನನ್ನ ಕಲ್ಪನಾ 
ನೀನೇ ನನ್ನ ವಂದನಾ 
ನೀನೇ ನನ್ನ ಪ್ರಾರ್ಥನಾ" 

ಹುಡುಗಿ ಗಾಭರಿಯಿಂದ ಕೇಳಿದಳು - "ನೀವು ಈ ನಾಲ್ವರಲ್ಲಿ ಯಾರಿಗಾದರೂ ನಿಮ್ಮ ಹೃದಯವನ್ನು ಕೊಟ್ಟಿಲ್ಲ ತಾನೇ?"
ಪಾಪ, ಗುಂಡಗೆ ಇದರ ದಂಡ ಭರಿಸಬೇಕಾಯಿತು. ಒಂದು ಒಳ್ಳೇ  5 ಸ್ಟಾರ್ ಹೋಟೆಲಿಗೆ ಕರೆದುಕೊಂಡು ಹೋಗಿ ಸಮಜಾಯಿಸಬೇಕಾಯಿತು. ಆದರೂ ಆಗಾಗ ಅವಳು ಗುಂಡನನ್ನು ಪೀಡಿಸುತ್ತಿದ್ದಳು 
" ಈ ಅರ್ಚನಾ ಯಾರು ?
  ಈ ಕಲ್ಪನಾ ಯಾರು ? ಪ್ಲೀಸ್ ಹೇಳು"
ಇನ್ನು ಸಂಶಯ ಬೇಡಾ ಎಂದು ಗುಂಡ ಅವಳನ್ನು ಮದುವೆ ಆಗಲು ನಿರ್ಧರಿಸಿದನು.
ಸಾವಿರದ ಓಂಬೈನೂರ ಐವತ್ತರಿಂದ ಇಂದಿನವರೆಗೂ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ತೋರಿಸುತ್ತಿರುವ ಹಾಗೆ ಇವರಿಬ್ಬರ ಮನೆಯಲ್ಲೂ ಕೂಡ ಹಿರಿಯರ ಜೊತೆ ಜಗಳ, ಮನಸ್ತಾಪ ಎಲ್ಲಾ ಆರಂಭವಾಯಿತು. ಆದರೆ ಇವರಿಬ್ಬರ ಪ್ರೀತಿ ಅಚಲವಾಗಿದ್ದರಿಂದ ಪ್ರೀತಿಗೇ ಗೆಲುವಾಗಿ ದೊಡ್ಡವರೆಲ್ಲ ಕೊನೆಗೂ ಒಪ್ಪಿ,
 "ಮದುವೆಯೂ ಆಯಿತು. 
ಮದುವೆಯೇನೋ ಆಯ್ತು 
ಆದರೆ ಗೋಳೂ ಶುರುವಾಯ್ತು
ಹಾರ್ಟ್ ಬೀಟ್ ಬದಲು- 
ಹಾರ್ಟ್ ಅಟ್ಯಾಕ್ ಪ್ರಾರಂಭವಾಯಿತು"
 
ಗುಂಡನಿಗೆ ಇನ್ನು ಮನೆ ಕೆಲ್ಸ ಪ್ರಾರಂಭವಾಯಿತು. ನೋಡಿ ಮತ್ತೇ...
ಬೆಳಿಗ್ಗೆ ಬೆಳಿಗ್ಗೆನೇ ಐದೂವರೆ ಗಂಟೆಗೆ ಚಳಿಯಲ್ಲಿ ಹಾಲಿನ ಡೈರಿ ಪಾಯಿಂಟ್ ಗೆ ಭಾರೀ ಮಳೆಯಲ್ಲಿ ಬರುತ್ತಿದ್ದಾನೆ, ನಮ್ಮ ಹೀರೊ ಗುಂಡ. ಹಾಲಿನವನು ಚಕಿತದಿಂದ ಕೇಳಿದ 
"ಓಹೋ ಗುಂಡ ಅವರೇ, ಮದುವೆ ಆಯ್ತೋ ? ಹಿ ಹಿ ಹಿ"
ಗುಂಡ ಸತ್ಯ ಹೇಳಿದ 
"ಇನ್ನೇನು ಮತ್ತೇ ನಮ್ಮಮ್ಮ ಈ ಚಳಿಯಲ್ಲಿ ಅದೂ ಈ ಮಳೆಯಲ್ಲಿ ಮನೆಯಿಂದ ಹೊರಗೆ ಕಳಿಸುತ್ತಿದ್ದರಾ?"

ಅಯ್ಯೋ ಬೇಜಾರು ಮಾಡಬೇಡಿ. ನಾನೇ ಸುಮ್ಮನೇ ಹಾಗೆ ತಮಾಷೆಗೆ ಹೇಳಿದೆ. ನಿಜವಾಗಿಯೂ ಗುಂಡ ಮತ್ತು ಅವನ ಧರ್ಮ ಪತ್ನಿ ತುಂಬಾ ಪ್ರೀತಿಯಿಂದ ಇದ್ದರು. ಒಬ್ಬರಿಗೊಬ್ಬರು ತಮ್ಮ ಜೀವವನ್ನೇ ಕೊಡಲು ತಯಾರಿದ್ದರು. ಅವರ ಪ್ರೇಮ ಎಷ್ಟು ಗಾಢವಾಗಿ ಇತ್ತೆಂದರೆ 
"ಮಮಾತಾಜ್ ಶಹಜಹಾನ್ ತರಹ 
ರೋಮಿಯೋ ಜೂಲಿಯಟ್ ತರಹ 
ಸಲೀಮ್ ಅನಾರ್ಕಲಿ ತರಹ 
ಸೊಹಿನಿ ಮಹಿವಾಲ್ ತರಹ"
ನೋಡುತ್ತಾ ನೋಡುತ್ತಾ 
"ದಿನಗಳು ಕಳೆದವು 
ತಿಂಗಳುಗಳು ಮುಗಿದವು 
ವರ್ಷಗಳು ಉರುಳಿದವು"

"ಒಬ್ಬನೇ ಮಗ ಇಂಜಿನೀಯರ್ ಆದನು 
ಒಬ್ಬಳೇ ಮಗಳು ಡಾಕ್ಟರ್ ಆದಳು 
ಮಕ್ಕಳ ಮದುವೆಯಾಗಿ 
ಗುಂಡ ಅಜ್ಜ ಸಹ ಆದರು"

ಆದ್ರೂ ನೋಡಿ ಹೃದಯದ ಬಡಿತ ಎಷ್ಟು ಮಹತ್ವದ್ದು ಅಂತ. ಗುಂಡಜ್ಜ ಬಾಲ್ಕನಿಯಿಂದ ಕೂಗುತ್ತಾರೆ 
"ರಾಮೂ ಬೇಗ ನನ್ನ ಹಲ್ಲಿನ ಸೆಟ್ ತೆಗೆದುಕೊಂಡು ಬಾ"
ನೌಕರ ಬಂದು 
"ತಾತ ಈಗಿನ್ನೂ ಊಟದ ಸಮಯವಾಗಿಲ್ಲವಲ್ಲ"
ಗುಂಡಜ್ಜ  ಹೇಳುತ್ತಾರೆ 
"ನನಗೆ ಗೊತ್ತು ಆದ್ರೆ ಅಲ್ಲಿ ಕೆಳಗೆ ನೋಡು, ಎಷ್ಟು ಸುಂದರ ಹುಡುಗಿ ಹೋಗುತ್ತಿದ್ದಾಳೆ. ಅವಳನ್ನು ನೋಡಿ ನನಗೆ ಸೀಟಿ ಹೊಡೆಯಬೇಕೆಂದು ಮನಸ್ಸಾಗುತ್ತಿದೆ"
ಹೀಗಿದೆ ನೋಡಿ ಹೃದಯ ಬಡಿತದ ಬಗ್ಗೆ ಒಂದು ಸಣ್ಣ ವಿವರಣೆ, ಗುಂಡನ ಮುಖಾಂತರ ಅಷ್ಟೇ.

ಆದರೂ ನನಗನ್ನಿಸುವುದೇನೆಂದರೆ ಈ ಹೃದಯವೆನ್ನುವುದು ಒಂದು ಟೆಲಿವಿಷನ್ ಸೆಟ್ ತರಹದ ಹಾಗೆ. ಹೃದಯ ಕೂಡ ಟಿವಿ ತರಹ ದಿನದ 24 ಗಂಟೆಯೂ ಬಣ್ಣಬಣ್ಣದ ಕನಸುಗಳನ್ನು ತೋರಿಸುತ್ತಾ ಇರುತ್ತದೆ. ಆದರೆ ಈ ಹೃದಯದ ರಿಮೋಟ್ ಕಂಟ್ರೋಲ್ ಮಾತ್ರ ಬೇರೆ ಜಾಗದಲ್ಲಿ ಮರೆಯಾಗಿರುತ್ತದೆ. ಆ ಜಾಗ ಯಾವುದು ಗೊತ್ತಾ?
ಆ ಜಾಗವೇ ತಲೆಯಲ್ಲಿರುವ 'ಬುದ್ದಿ'.  ಆದ್ದರಿಂದ  ಸ್ನೇಹಿತರೇ ನಿಮ್ಮ ಬುದ್ಧಿಯನ್ನು ಹಿಡಿತದಲ್ಲಿಟ್ಟುಕೊಳ್ಳಿ.
end- ನಡೆದದ್ದು ಅಲ್ಲ imagination written sometime ಇನ್ 2002
        translated and modified version of my hindi article

.
back to  

end.

.

No comments:

Post a Comment